ಸುದ್ದಿ 

ಅಜಯ್ ರಾವ್ ಅಭಿನಯದ ‘ರಾಧೇಯ’ ಚಿತ್ರದ ಟೀಸರ್ ಲಾಂಚ್

ಅಜಯ್ ರಾವ್ ಅಭಿನಯದ ‘ರಾಧೇಯ’ ಚಿತ್ರದ ಟೀಸರ್ ಲಾಂಚ್! ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಅಜಯ್ ರಾವ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾ ‘ರಾಧೇಯ’ ಟೀಸರ್ ಬಿಡುಗಡೆಯಾಗಿದೆ. ವೇದಗುರು ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಇದೇ ಅವರ ನಿರ್ದೇಶನದ ಮೊದಲ ಪ್ರಯತ್ನ. ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಅಜಯ್ ರಾವ್ ಜೊತೆ ಸೋನಾಲ್ ಮಾಂಟೆರೋ ನಾಯಕಿಯಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ವೇದಗುರು ಮಾತನಾಡಿ, “ಮಹಾಭಾರತದ ಕರ್ಣನ ಮತ್ತೊಂದು ಹೆಸರು ‘ರಾಧೇಯ’. ಆದರೆ ನಮ್ಮ ಚಿತ್ರದ ಕಥೆಗೆ ಕರ್ಣನೊಂದಿಗೆ ನೇರ ಸಂಬಂಧವಿಲ್ಲ. ಆದರೆ ಆತನ ತ್ಯಾಗದ ಅಂಶದಿಂದ ಪ್ರೇರಣೆ ಪಡೆದಿದ್ದೇವೆ. ಇದು ಲವ್ ಸ್ಟೋರಿಯಾದರೂ, ಹೊಸ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಮೊದಲಿಗೆ ಅಜಯ್ ರಾವ್ ಅವರಿಗೆ ಈ ಕಥೆ ಹೇಳಿದಾಗ ನಾನು ನಿರ್ದೇಶಕನಷ್ಟೇ ಇದ್ದೆ, ನಂತರ ನಿರ್ಮಾಪಕನಾದೆ. ಚಿತ್ರ ವಿತರಣೆಗೆ ಕಾಂತರಾಜು…

ಮುಂದೆ ಓದಿ..
ಸುದ್ದಿ 

ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಯಿಂದ ಉಂಟಾಗಬಹುದಾದ ಗಾಯ, ಹಾನಿಗಳಿಗೆ ಚಿಕಿತ್ಸೆ ನೀಡಲು ದಿನದ 24 ಗಂಟೆಯೂ ಸೇವೆ ನೀಡಲು ಬೆಂಗಳೂರು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ

ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಯಿಂದ ಉಂಟಾಗಬಹುದಾದ ಗಾಯ, ಹಾನಿಗಳಿಗೆ ಚಿಕಿತ್ಸೆ ನೀಡಲು ದಿನದ 24 ಗಂಟೆಯೂ ಸೇವೆ ನೀಡಲು ಬೆಂಗಳೂರು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಡಾ.ಶಶಿಧರ್, ದೀಪಾವಳಿ ಪಟಾಕಿ ಸಿಡಿತದಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಮೊದಲು ಗಾಯ ಆಗದಂತೆ ತಡೆಗಟ್ಟಲು ಮನೆಗಳಲ್ಲಿ ಎಚ್ಚರವಹಿಸಬೇಕು. ಇದರ ಹೊರತಾಗಿಯೂ ಗಾಯ ಅಥವಾ ಅನಾಹುತಗಳು ನಡೆದರೆ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಸೇವೆ ನೀಡಲು 25 ಬೆಡ್‌ ವ್ಯವಸ್ಥೆ ಮಾಡಲಾಗಿದೆ. 10 ಮಹಿಳೆಯರ, 10 ಪುರುಷರ ಬೆಡ್‌ ಹಾಗೂ 5 ಮಕ್ಕಳ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಿದ್ದು, ಆಸ್ಪತ್ರೆಗಳ ವೈದ್ಯರಿಗೆ ದೀಪಾವಳಿ ಹಬ್ಬಕ್ಕೆ ರಜೆ ರದ್ದು ಮಾಡಲಾಗಿದೆ. ಹೀಗಾಗಿ ಎಲ್ಲಾ ವೈದ್ಯಕೀಯ ಸಿಬ್ಬಂದಿ ಸೇವೆ ಲಭ್ಯವಿರಲಿದ್ದಾರೆ ಎಂದು ತಿಳಿಸಿದರು. ಮಿಂಟೋ ಆಸ್ಪತ್ರೆಯಲ್ಲಿ ಪ್ರತಿ…

ಮುಂದೆ ಓದಿ..
ಸುದ್ದಿ 

ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಿಂದ ಮೊದಲ ಹಾಡು ಬಿಡುಗಡೆ!

ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಿಂದ ಮೊದಲ ಹಾಡು ಬಿಡುಗಡೆ! ಹೆಚ್ಚು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿರ್ದೇಶಕ ಸಿಂಪಲ್ ಸುನಿ, ಇದೀಗ ತಮ್ಮ ಶಿಷ್ಯನಾದ ಶೀಲಮ್ ಅವರನ್ನು ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಅವರ ನಿರ್ದೇಶನದ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ ಈಗ ಸುದ್ದಿಯಲ್ಲಿದೆ. ಶೀಲಮ್, ಸುನಿಯ ನಿರ್ದೇಶನದ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ನಾಯಕನಾಗಿ ನಟಿಸುತ್ತಿರುವ ಅವರು, ಈ ಹಿಂದೆ ಕೆಲವು ಚಿತ್ರಗಳಲ್ಲಿ ಸಣ್ಣಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಕನಸಿನ ನಾಯಕಪಾತ್ರದ ಮೂಲಕ ಅವರು ಹೊಸ ಹಾದಿ ಹಿಡಿದಿದ್ದಾರೆ. ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಚಿತ್ರದಲ್ಲಿನ ಮೊದಲ ಹಾಡು “ನನ್ನೆದೆಯ ಹಾಡೊಂದನು” ಬಿಡುಗಡೆಯಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಶೀಲಮ್, ಸಾತ್ವಿಕಾ ಮತ್ತು ಮೋಕ್ಷಾ ಕುಶಾಲ್ ನೃತ್ಯ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, “ಚಿತ್ರದ ಕಥೆ ರಿವರ್ಸ್ ಸ್ಕ್ರೀನ್…

ಮುಂದೆ ಓದಿ..
ಸುದ್ದಿ 

ಹಾವೇರಿ: ಲಂಚದ ಬಲೆಗೆ ಶಿರಸ್ತೇದಾರ ಸೇರಿದಂತೆ 3 ಅಧಿಕಾರಿಗಳು ಬಿದ್ದಿದ್ದಾರೆ

ಹಾವೇರಿ: ಲಂಚದ ಬಲೆಗೆ ಶಿರಸ್ತೇದಾರ ಸೇರಿದಂತೆ 3 ಅಧಿಕಾರಿಗಳು ಬಿದ್ದಿದ್ದಾರೆ ಹಾವೇರಿ: ಹಾನಗಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಲಂಚಕಾಮಕ್ಕೆ ಮುಂಜಾನೆಯಿಂದ ತೊಡಗಿದ್ದ ಶಿರಸ್ತೇದಾರ, ಸಹಾಯಕರು ಹಾಗೂ ಇತರ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರೋಪಿಗಳ ಹೆಸರುಗಳು: ಶಿರಸ್ತೇದಾರ ತಮ್ಮಣ್ಣ ಕಾಂಬಳೆ ದ್ವಿತೀಯ ದರ್ಜೆ ಸಹಾಯಕರು ಗೂಳಪ್ಪ ಮನಗೂಳಿ ಮತ್ತು ಶಿವಾನಂದ ಬಡಿಗೇರ ಘಟನೆಯ ಹಿನ್ನೆಲೆ: ಬೊಮ್ಮನಹಳ್ಳಿ ಗ್ರಾಮದ ಶಂಕ್ರಪ್ಪ ಗುಮಗುಂಡಿ ಅವರು ತಮ್ಮ ಆರ್‌ಟಿಸಿ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ₹12,000 ಲಂಚ ಕೊಡುತ್ತಿದ್ದ ವೇಳೆ ಅಧಿಕಾರಿಗಳು ಲೋಕುಾಯಕ್ತರು ರೆಡ್‌ಹ್ಯಾಂಡ್ ಆಗಿ ಬಂಧನೆಗೆ ಒಳಪಟ್ಟರು. ಈ ಕುರಿತು ನವೀನ್ ಪಾಟೀಲ ಅವರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಕರಣವನ್ನು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಮುಂದೆ ಓದಿ..
ಅಂಕಣ 

ಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು ಉಂಟಾಗಲು ಕಾರಣ ಭಕ್ತಿಯೇ – ಮತಿ ಭ್ರಮಣೆಯೇ – ಅಜ್ಞಾನವೇ – ದುರಾಸೆಯೇ……

ಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು ಉಂಟಾಗಲು ಕಾರಣ ಭಕ್ತಿಯೇ – ಮತಿ ಭ್ರಮಣೆಯೇ – ಅಜ್ಞಾನವೇ – ದುರಾಸೆಯೇ…… ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಬಹುದೊಡ್ಡ ಜನಜಂಗುಳಿ ಸೇರುತ್ತಿದೆ. ಇಡೀ ಹಾಸನ ನಗರದಲ್ಲಿ ಟ್ರಾಫಿಕ್ ಜಾಮ್ ಮತ್ತು ದೇವಾಲಯದ ಸುತ್ತಮುತ್ತ ಸ್ವಲ್ಪ ನೂಕುನುಗ್ಗಲು, ದೊಡ್ಡ ಸರತಿಯ ಸಾಲುಗಳು ಕಂಡುಬರುತ್ತಿದೆ. ಎಂದೂ ಇಲ್ಲದಷ್ಟು ಭಕ್ತಿಯ ರಸ ಜನರಲ್ಲಿ ಉಕ್ಕಿ ಹರಿಯುತ್ತಿದೆ. ಈ ವಾರ ಅದು ತಿರುಪತಿಯ ಭಕ್ತರ ಸಂಖ್ಯೆಯನ್ನು ಮೀರಿದೆ ಎನ್ನುವ ಸುದ್ದಿಯು ಸಹ ಕೇಳಿ ಬರುತ್ತಿದೆ…… ಭಾರತೀಯರ ಮೋಕ್ಷದ ಹಾದಿಯ ನಂಬಿಕೆಗಳಲ್ಲಿ ಜ್ಞಾನ, ಭಕ್ತಿ, ಕರ್ಮ, ಯೋಗ ( ರಾಜ ) ಮಾರ್ಗಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಜನರನ್ನು ಆಕರ್ಷಿಸಿರುವುದು ಭಕ್ತಿ ಮಾರ್ಗ ಮತ್ತು ಅತ್ಯಂತ ಭಾವನಾತ್ಮಕ ಸೆಳೆತವನ್ನು ಹೊಂದಿರುವುದು ಸಹ ಭಕ್ತಿ ಮಾರ್ಗವೇ. ಅದಕ್ಕೆ ಮೂಲ ಕಾರಣ ಅತ್ಯಂತ ಭಕ್ತಿ ಎಂಬ ಭಾವ ಅತ್ಯಂತ ಆಂತರಿಕವಾದದ್ದು, ಸುಲಭವಾದದ್ದು, ಸರಳವಾದದ್ದು,…

ಮುಂದೆ ಓದಿ..
ಸುದ್ದಿ 

ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ: ಹೆತ್ತ ತಾಯಿಯನ್ನೇ ಕತ್ತು ಸಿಳ್ಳಿದ ಪಾಪಿ ಮಗ!ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ

ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ: ಹೆತ್ತ ತಾಯಿಯನ್ನೇ ಕತ್ತು ಸಿಳ್ಳಿದ ಪಾಪಿ ಮಗ! ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದ ಈ ಘಟನೆ ಮಾನವೀಯತೆಯ ಮಿತಿಯನ್ನು ಮೀರಿ ಸಮಾಜವನ್ನು ಬೆಚ್ಚಿಬೀಳಿಸಿದೆ. ಕುಡಿತದ ವ್ಯಸನದಲ್ಲಿದ್ದ ವೆಂಕಟೇಶ ಎಂಬ ಕಿರಾತಕ ಮಗ, ಕ್ಷುಲ್ಲಕ ಕಾರಣಕ್ಕಾಗಿ ತನ್ನ ತಾಯಿಯ ಜೀವವನ್ನೇ ಕಸಿದುಕೊಂಡಿದ್ದಾನೆ. ಮಾಹಿತಿಯ ಪ್ರಕಾರ, ಕುಡಿದ ಮತ್ತಲ್ಲೇ ತಾಯಿ ಶ್ಯಾವಕ್ಕ (58) ಅವರನ್ನು ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುಳಿದು, ನಂತರ ಕತ್ತು ಸಿಳ್ಳಿ ಕೊಲೆಗೈದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಶ್ಯಾವಕ್ಕ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ತಾಯಿ ಹಣ ಕೊಡಲಿಲ್ಲ ಎನ್ನುವುದೇ ಈ ಹೀನ ಕೃತ್ಯದ ಹಿನ್ನೆಲೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಾಗ ಕುಡಿತದ ವಿಷಯಕ್ಕೆ ತಾಯಿ–ಮಗನ ನಡುವೆ ಜಗಳಗಳು ನಡೆಯುತ್ತಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯ ಬಳಿಕ ಪಾಪಿ ಮಗ ವೆಂಕಟೇಶ ಪರಾರಿಯಾಗಿದ್ದಾನೆ. ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಅಮಾನವೀಯ…

ಮುಂದೆ ಓದಿ..
ಸುದ್ದಿ 

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಪ್ರಿಯಾಂಕಾ (21) ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವು. ಮನೆಯೊಂದರ ನೀರಿನ ಸಂಪ್‌ನಲ್ಲಿ ಶವ ಪತ್ತೆಯಾಗಿದೆ.

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಪ್ರಿಯಾಂಕಾ (21) ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವು. ಮನೆಯೊಂದರ ನೀರಿನ ಸಂಪ್‌ನಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ಕುಟುಂಬದವರಾದ ವರದಕ್ಷಿಣೆ ಮಾಹಿತಿ ಪಡೆದು ತನಿಖೆ ನಡೆಸುತ್ತಿರುವಾಗ, ಪ್ರಾಥಮಿಕ ತಪಾಸಣೆಯಲ್ಲಿ ಗಂಡ ಮಾಹಾಂತೇಶ್ ಪ್ರಿಯಾಂಕಾ ಕೊಲೆ ಮಾಡಿ ಬೇರೆ ಮನೆಯಲ್ಲಿ ಶವವನ್ನು ಸಂಪ್‌ನಲ್ಲಿ ಹಾಕಿದರೆಂಬ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ತಿಂಗಳಿನಿಂದ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ವಿಜಯನಗರ ಜಿಲ್ಲೆಯ ಪ್ರಿಯಾಂಕಾ, ಗದಗ ಜಿಲ್ಲೆಯ ಮಾಹಾಂತೇಶ್ ಜೊತೆಗೆ ವಿವಾಹಿತೆಯಾಗಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಿದ್ದು, ಎಸ್ಪಿ ರೋಹನ್ ಜಗದೇಶ್ ವಿವರಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಲವ್ ಮ್ಯಾರೇಜ್ ಹಿನ್ನೆಲೆ: ತಾಯಿಗೆ ಬೆಂಕಿ ಹಚ್ಚಿದ ಹುಡುಗಿಯ ತಂದೆ – ಚಿಕ್ಕಬಳ್ಳಾಪುರದಲ್ಲಿ ಘಟನೆ

ಲವ್ ಮ್ಯಾರೇಜ್ ಹಿನ್ನೆಲೆ: ತಾಯಿಗೆ ಬೆಂಕಿ ಹಚ್ಚಿದ ಹುಡುಗಿಯ ತಂದೆ – ಚಿಕ್ಕಬಳ್ಳಾಪುರದಲ್ಲಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಂಗಟಪಲ್ಲಿ ಗ್ರಾಮದಲ್ಲಿ ನಡೆದ ಕ್ರೂರ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಮಗನ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಘಟನೆ ವಿವರ: ಬಯ್ಯಮ್ಮ (48) ಎಂಬ ಮಹಿಳೆಯು ತನ್ನ ಮಗ ಅಂಬರೀಶ್ ಮತ್ತು ಪ್ರತಿಭಾ ಅವರ ಮದುವೆ ಹಿನ್ನೆಲೆ ಬಲಿ ಆಗಿದ್ದಾಳೆ. ಕಳೆದ ಸೋಮವಾರ ಕಡದಲಮರಿ ದೇವಸ್ಥಾನದಲ್ಲಿ ಅಂಬರೀಶ್ ಮತ್ತು ಪ್ರತಿಭಾ ಪರಸ್ಪರ ಪ್ರೀತಿ ವಿವಾಹ ಮಾಡಿಕೊಂಡಿದ್ದರು. ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಜೋಡಿ ದೇವಸ್ಥಾನದಲ್ಲೇ ಮದುವೆ ಮಾಡಿಕೊಂಡಿದ್ದರು.ಇದರಿಂದ ಕೋಪಗೊಂಡ ಪ್ರತಿಭಾ ತಂದೆ ಬೈರೆಡ್ಡಿ ಹಾಗೂ ಕುಟುಂಬಸ್ಥರು ಬಯ್ಯಮ್ಮನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಗಂಭೀರವಾಗಿ ಸುಟ್ಟ…

ಮುಂದೆ ಓದಿ..
ಸುದ್ದಿ 

27 ತಿಂಗಳಿಂದ ಸಂಬಳವಿಲ್ಲ – ಕಿರುಕುಳದಿಂದ ಬೇಸತ್ತ ವಾಟರ್‌ಮೆನ್ ಆತ್ಮಹತ್ಯೆ!

27 ತಿಂಗಳಿಂದ ಸಂಬಳವಿಲ್ಲ – ಕಿರುಕುಳದಿಂದ ಬೇಸತ್ತ ವಾಟರ್‌ಮೆನ್ ಆತ್ಮಹತ್ಯೆ! ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಮಾನವೀಯತೆಯ ಮಿತಿ ಮೀರುವ ಘಟನೆ ನಡೆದಿದೆ. 27 ತಿಂಗಳಿನಿಂದ ಸಂಬಳ ನೀಡದೆ ಕಿರುಕುಳ ನೀಡಿದ ಪರಿಣಾಮ, ಗ್ರಾಮ ಪಂಚಾಯಿತಿ ವಾಟರ್‌ಮೆನ್ ಚಿಕ್ಕೂಸನಾಯಕ ಅವರು ಬೇಸತ್ತು ಗ್ರಾಮ ಪಂಚಾಯಿತಿ ಕಚೇರಿ ಎದುರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆಯಿಂದ ಗ್ರಾಮದಲ್ಲಿ ಶೋಕದ ಅಲೆ ಹರಡಿದ್ದು, ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತೊಮ್ಮೆ ಬಯಲಾಗುವಂತಾಗಿದೆ. ಡೆತ್ ನೋಟ್‌ನಲ್ಲಿ ಪಿಡಿಒ ಹಾಗೂ ಅಧ್ಯಕ್ಷೆಯ ಪತಿ ವಿರುದ್ಧ ಆಘಾತಕಾರಿ ಆರೋಪ: ಚಿಕ್ಕೂಸನಾಯಕ ಅವರು ಬರೆದಿರುವ ಡೆತ್ ನೋಟ್‌ನಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ ಮೋಹನ್ ಕುಮಾರ್ ಹಾಗೂ ಪಿಡಿಒ ರಾಮೇಗೌಡ ನನ್ನ ಸಾವಿಗೆ ಕಾರಣರೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. “27 ತಿಂಗಳಿಂದ ಸಂಬಳ ನೀಡದೆ ಹಿಂಸೆ ಕೊಡುತ್ತಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕೆಲಸ ಮಾಡಬೇಕು ಎಂದು ಕಿರುಕುಳ ಕೊಡುತ್ತಾರೆ.…

ಮುಂದೆ ಓದಿ..
ಸುದ್ದಿ 

ಹತ್ತಿ ಮಿಲ್‌ನಲ್ಲಿ 3 ಟನ್‌ ಅಕ್ರಮ ಅನ್ನಭಾಗ್ಯ ಅಕ್ಕಿ ಪತ್ತೆ!

ಹತ್ತಿ ಮಿಲ್‌ನಲ್ಲಿ 3 ಟನ್‌ ಅಕ್ರಮ ಅನ್ನಭಾಗ್ಯ ಅಕ್ಕಿ ಪತ್ತೆ! ಯಾದಗಿರಿ: ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ಸಾಗಿಸುವ ಅಕ್ರಮ ಜಾಲ ಬಯಲಾಗುತ್ತಿದ್ದಂತೆಯೇ, ಇದೀಗ ಹತ್ತಿ ಮಿಲ್‌ನಲ್ಲಿಯೇ ಪಡಿತರ ಅಕ್ಕಿ ಅಡಗಿಸಿರುವುದು ಪತ್ತೆಯಾಗಿದೆ. ಗುರುಮಠಕಲ್ ತಾಲ್ಲೂಕಿನ ಲಕ್ಷ್ಮೀ ತಿಮ್ಮಪ್ಪ ಹೆಸರಿನ ಕಾಟನ್‌ ಮಿಲ್‌ನ 2ನೇ ಗೋದಾಮಿನಲ್ಲಿ ಸುಮಾರು 3 ಟನ್‌ ಪಡಿತರ ಅಕ್ಕಿ ದಾಸ್ತಾನು ಪತ್ತೆಯಾಗಿದೆ. ಸಿಐಡಿ ತನಿಖಾ ತಂಡದವರು ಈ ಪತ್ತೆ ಮಾಡಿದ್ದಾರೆ.ಹಿಂದಿನ ಸೆಪ್ಟೆಂಬರ್‌ 6ರಂದು ಗುರುಮಠಕಲ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ ಬಾಲಾಜಿ ರೈಸ್‌ಮಿಲ್‌ಗಳಲ್ಲಿ 3,985 ಕ್ವಿಂಟಾಲ್‌ ಅಕ್ರಮ ಅಕ್ಕಿ (₹1.21 ಕೋಟಿ ಮೌಲ್ಯ) ಪತ್ತೆಯಾಗಿತ್ತು. ಈ ಪ್ರಕರಣದ ಹಿನ್ನೆಲೆ ಸಿಐಡಿ ತಂಡ ತನಿಖೆಗೆ ತೆರಳಿತ್ತು.ತನಿಖೆ ವೇಳೆ ಸಿಐಡಿ ಅಧಿಕಾರಿಗಳು ರೈಸ್‌ಮಿಲ್‌ನ ವೇ ಬ್ರಿಡ್ಜ್‌ಗೆ ಭೇಟಿ ನೀಡಿದಾಗ, ಹತ್ತಿರದಲ್ಲಿದ್ದ ಹತ್ತಿ ಮಿಲ್‌ನೊಳಗೂ ನುಗ್ಗಿ ಪರಿಶೀಲನೆ ನಡೆಸಿದರು. ಅಲ್ಲಿ ಅಕ್ಕಿ ಗೋಣಿಚೀಲಗಳಲ್ಲಿ ತುಂಬಿ…

ಮುಂದೆ ಓದಿ..