ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಮಾರಾಟ: ಸಂಜೀವಿನಿ ನಗರದಲ್ಲಿ ದಾಳಿ, ಪ್ರಕರಣ ದಾಖಲು
ಬೆಂಗಳೂರು, ಜುಲೈ 20. 2025ನಗರದ ಸಂಜೀವಿನಿ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಕೊಡಿಗೆಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ, ಬಲಮುರಿ ಗಣೇಶ ದೇವಸ್ಥಾನದ ಸಮೀಪದ 2ನೇ ಮುಖ್ಯರಸ್ತೆಯಲ್ಲಿ ಇರುವ “ಆದಿ ಟೀ ಸ್ಟಾಲ್” ನಲ್ಲಿ ತಂಬಾಕು ಉತ್ಪನ್ನಗಳನ್ನು ಜನಸಾಮಾನ್ಯರಿಗೆ ಮಾರಾಟ ಮಾಡಲಾಗುತ್ತಿರುವುದು ಪತ್ತೆಯಾಗಿದೆ. ಕೊಡುಗೆಹಳ್ಳಿ ಪೊಲೀಸರ ಪ್ರಕಾರ, ಪಿಎಸ್‌ಐ ಕುಮಾರ್ ಹಾಗೂ ಕಾನ್‌ಸ್ಟೆಬಲ್ ಧನಂಜಯ ಕೆ. ಅವರ ನೇತೃತ್ವದ ತಂಡ ಬೆಳಿಗ್ಗೆ 09:45ರ ಸುಮಾರಿಗೆ ಗಸ್ತು ವೇಳೆ ಈ ದಾಳಿಯನ್ನು ನಡೆಸಿತು. ನಂತರ ಈ ಕುರಿತು ಅಧಿಕಾರಿಗಳಿಗೆ ವರದಿ ನೀಡಿದ್ದು, ಬೆಳಿಗ್ಗೆ 10:15ಕ್ಕೆ ಅಧಿಕೃತ ಎಫ್‌ಐಆರ್ ದಾಖಲಿಸಲಾಗಿದೆ (ದಾಖಲೆ ಸಂಖ್ಯೆ: DA-23205). ಕೊಡಿಗೆಹಳ್ಳಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ…
ಮುಂದೆ ಓದಿ..
