ಸುದ್ದಿ 

ಮದುವೆ ನಂತರ ಪತ್ನಿಯಿಂದ ಸುಳ್ಳು ದೂರಿನ ಕಿರುಕುಳ – ಸೇನಾ ಅಧಿಕಾರಿಯ ಕುಟುಂಬದಿಂದ ಪೊಲೀಸ್ ದೂರು

ಬೆಂಗಳೂರು: ಆಗಸ್ಟ್ 16 2025ಸೇನಾ ಮೇಜರ್ ಗೌರಿ ಶಂಕರ್ ಪೌಲ್ ಅವರ ಕುಟುಂಬವು, ಪತ್ನಿಯಿಂದ ಮದುವೆಯ ಕೆಲವೇ ದಿನಗಳಲ್ಲಿ ಆರಂಭವಾದ ಕಿರುಕುಳ ಹಾಗೂ ಸುಳ್ಳು ದೂರಿನ ಆರೋಪದ ಹಿನ್ನೆಲೆಯಲ್ಲಿ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದೆ. 2021ರ ಜುಲೈ 2ರಂದು ಪಂಜಾಬ್ ರಾಜ್ಯದ ಪಠಾಣ್‌ಕೋಟ್‌ನಲ್ಲಿ ಮದುವೆಯಾದ ದಂಪತಿಗಳ ಜೀವನದಲ್ಲಿ, ಒಂದು ವಾರದೊಳಗೇ ವೈಮನಸ್ಸು ಶುರುವಾಗಿದೆ. ಪತ್ನಿ ವಿನಿತಾ ಬಸ್ಸಾ ಅವರ ಬಗ್ಗೆ, ಹಿಂದೆಯೇ ಮತ್ತೊಬ್ಬರೊಂದಿಗೆ ಮದುವೆಯಾಗಿದ್ದಾರೆಯೆಂಬ ಅನುಮಾನ ವ್ಯಕ್ತವಾಗಿದ್ದು, ಇದರ ಕುರಿತು ಕೇಳಿದಾಗ ಆಕೆ ಕೋಪಗೊಂಡು ವರದಕ್ಷಿಣೆ ಕಿರುಕುಳದ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ನೀಡಿದ್ದಾಳೆ ಎಂದು ದೂರುದಲ್ಲಿ ತಿಳಿಸಲಾಗಿದೆ. ಅದಾದ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ — ಮಣಿಪುರ, ಹರಿಯಾಣ, ಪಂಜಾಬ್ — ದೂರು-ಪ್ರತಿದೂರುಗಳ ಸರಮಾಲೆ ಮುಂದುವರಿದಿದ್ದು, ಆರೋಪಿಯು 50 ಲಕ್ಷ ರೂ. ಬೇಡಿಕೆ, ಕೆಲಸದ ಸ್ಥಳದಲ್ಲಿ ಗಲಾಟೆ, ಸ್ವಯಂ ಹಾನಿ ಮಾಡುವ ಬೆದರಿಕೆ, ಹಾಗೂ…

ಮುಂದೆ ಓದಿ..
ಸುದ್ದಿ 

ಲಾಭಾಂಶದ ಹೆಸರಿನಲ್ಲಿ ₹48.90 ಲಕ್ಷ ವಂಚನೆ — ಅಸಾಂ ಪಾಷ ವಿರುದ್ಧ ಪ್ರಕರಣ

ಬೆಂಗಳೂರು ಆಗಸ್ಟ್ 16 2025ಡಿ.ಟಿ.ಎಚ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ತಿಂಗಳಿಗೆ ಲಾಭಾಂಶ ನೀಡುವುದಾಗಿ ನಂಬಿಸಿ, ಒಟ್ಟು ₹48.90 ಲಕ್ಷ ಹಣವನ್ನು ಪಡೆದು ವಂಚಿಸಿದ ಘಟನೆ ಭಾರತ್ ನಗರದಲ್ಲಿ ನಡೆದಿದೆ. ಸಂಪಿಗೆಹಳ್ಳಿ ಪೊಲೀಸರ ಪ್ರಕಾರ, 2024ರ ಆಗಸ್ಟ್‌ನಲ್ಲಿ ಡಿ.ಟಿ.ಎಚ್ ಅಳವಡಿಸಲು ಅಸಾಂ ಪಾಷ ಮನೆಗೆ ಹೋದ ಫಿರ್ಯಾದುದಾರರನ್ನು ಆರೋಪಿಯು ಪರಿಚಯ ಮಾಡಿಕೊಂಡನು. ಅವರ ಜೀವನ ಪರಿಸ್ಥಿತಿ ತಿಳಿದುಕೊಂಡು, ತಿಂಗಳಿಗೆ ₹15 ಸಾವಿರ ಲಾಭಾಂಶ ನೀಡುವುದಾಗಿ ಹೇಳಿ ಹಂತ ಹಂತವಾಗಿ ಹಣ ಸ್ವೀಕರಿಸಿದನು. ಕೆಲವು ಬಾರಿ ಲಾಭಾಂಶ ನೀಡಿದ ನಂತರ, ಬಂಗಾರ ಅಡಮಾನ, ಬ್ಯಾಂಕ್ ಸಾಲ ಹಾಗೂ ನೇರ ಖಾತೆ ವರ್ಗಾವಣೆಗಳ ಮೂಲಕ ಕೋಟಿಗೂ ಸಮೀಪವಾದ ಹಣವನ್ನು ಪಡೆದುಕೊಂಡು, ಬಳಿಕ ಯಾವುದೇ ಹಣ ಮರಳಿಸದೆ ತಪ್ಪಿಸಿಕೊಂಡಿದ್ದಾನೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಾಂ ಪಾಷ ವಿರುದ್ಧ ಮೋಸ ಮತ್ತು ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮುಂದೆ ಓದಿ..
ಸುದ್ದಿ 

ಚಿನ್ನದ ಸರ ಗಿರವಿ ಇಟ್ಟು ಹಣ ಪಡೆದ ಬಳಿಕ ಹಿಂತಿರುಗಿಸದೇ ಮೋಸ – ಪವನ್‌ಕುಮಾರ್ ವಿರುದ್ಧ ದೂರು

ಬೆಂಗಳೂರು ಆಗಸ್ಟ್ 16 2025 ತುಮಕೂರಿನಲ್ಲಿ ಚಿನ್ನದ ಸರವನ್ನು ಗಿರವಿ ಇಟ್ಟು ಹಣ ಪಡೆದು, ಹಣವನ್ನು ಮರುಪಾವತಿ ಮಾಡಿದ ನಂತರವೂ ಸರವನ್ನು ಹಿಂತಿರುಗಿಸದೇ ಮೋಸ ಮಾಡಿದ ಪ್ರಕರಣದಲ್ಲಿ ವ್ಯಾಪಾರಿಣಿಯೊಬ್ಬರು ವಿದ್ಯಾನಪುರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಮಹಿಳೆ ಸ್ಟೇಷನರಿ ಅಂಗಡಿ ನಡೆಸುತ್ತಿದ್ದು, ಅವರ ಗಂಡ ಅರುಣ್ ಅವರು ಹಿಂದಿನಲ್ಲಿ ವರಾಹಿ ಗೋಲ್ಡ್ ಬ್ರಿಯರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕಂಪನಿಯ ಮಾಲೀಕ ಪವನ್‌ಕುಮಾರ್ ಅವರ ಪರಿಚಯವಾಯಿತು. 2025ರ ಫೆಬ್ರವರಿ 27ರಂದು ಮಹಿಳೆ 35.5 ಗ್ರಾಂ ತೂಕದ ಚಿನ್ನದ ಸರವನ್ನು ಗಿರವಿಗೆ ಇಟ್ಟು ₹1 ಲಕ್ಷ ಪಡೆದರು. ನಂತರ 2025ರ ಮೇ 6 ಮತ್ತು 7ರಂದು ಒಟ್ಟು ₹1 ಲಕ್ಷವನ್ನು ಆನ್‌ಲೈನ್ ಮೂಲಕ ಪವನ್‌ಕುಮಾರ್ ಅವರ ಖಾತೆಗೆ ಮರುಪಾವತಿ ಮಾಡಿದರು. ಆದಾಗ್ಯೂ, ಪವನ್‌ಕುಮಾರ್ ಅವರು ಚಿನ್ನದ ಸರವನ್ನು ಹಿಂತಿರುಗಿಸದೇ ಕಾಲಹರಣ ಮಾಡುತ್ತಿದ್ದು, ಮಹಿಳೆ ಪದೇಪದೇ ಕೇಳಿದ ಮೇಲೂ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ವಂಚನೆ: ಡ್ರೈ ಫ್ರೂಟ್ ಆರ್ಡರ್ ಮಾಡಿ ₹74,000 ಕಳೆದುಕೊಂಡ ನಾಗರಿಕ

ಬೆಂಗಳೂರು ಆಗಸ್ಟ್ 16 2025 ಕಾಳಿಗ ರಾಜರಾಜಿ ಎಂಬವರು ಕೊಡುಗೆಹಳ್ಳಿ ಪೊಲೀಸರಿಗೆ ನೀಡಿದ ದೂರು ಪ್ರಕಾರ, 12 ಆಗಸ್ಟ್ 2025 ರಂದು ಆನ್‌ಲೈನ್‌ನಲ್ಲಿ ಡ್ರೈ ಫ್ರೂಟ್ ಆರ್ಡರ್ ಮಾಡಿ ಯುಪಿಐ ಮೂಲಕ ₹299 ಪಾವತಿಸಿದ್ದಾರೆ. ನಂತರದ ದಿನ 7085716403 ಸಂಖ್ಯೆಯಿಂದ ಕರೆ ಮಾಡಿ 30% ರಿಯಾಯಿತಿ ನೀಡುವುದಾಗಿ ತಿಳಿಸಲಾಗಿದೆ. 13 ಆಗಸ್ಟ್ 2025 ರಂದು ಮತ್ತೊಬ್ಬರು 7004098089 ಸಂಖ್ಯೆಯಿಂದ ಕರೆ ಮಾಡಿ, ಹಣ ಮರುಪಾವತಿ ಮಾಡುವ ನೆಪದಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾರೆ. ನಂತರ ಖಾತೆಯಿಂದ ₹74,000 (ವಹಿವಾಟು ಸಂಖ್ಯೆ: 223-5010019677589) ಹಣ ಕಳವಾಗಿದೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಇದು ಆನ್‌ಲೈನ್ ವಂಚನೆ ಎಂದು ದೃಢಪಟ್ಟಿದ್ದು, ಕೊಡುಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಟೆಲಿಗ್ರಾಂನಲ್ಲಿ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ

ಬೆಂಗಳೂರು ಆಗಸ್ಟ್ 16 2025 ಟೆಲಿಗ್ರಾಂ ಪಾರ್ಟ್‌ಟೈಮ್ ಕೆಲಸದ ಆಮಿಷವೊಡ್ಡಿ ಮಹಿಳೆಯೊಬ್ಬರ ಖಾತೆಯಿಂದ ₹1.47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 11, 2025 ರಂದು CGI Co. Ltd. ಎಂಬ ಐಡಿಯಿಂದ ದೂರುದಾರರಿಗೆ “ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬ್ ಮಾಡಿದರೆ ಹಣ ನೀಡಲಾಗುತ್ತದೆ” ಎಂಬ ಸಂದೇಶವೊಂದು ಬಂದಿತ್ತು. ನಂಬಿದ ಅವರು ಮೊದಲು ನೋಂದಣಿ ಶುಲ್ಕ, ಬಳಿಕ ಜಿ.ಎಸ್.ಟಿ. ಹೆಸರಿನಲ್ಲಿ ಹಣ ವರ್ಗಾಯಿಸಿದರು. maruthicargo@kphdfc, manasacandu-1@okicici, lucky77chintu-1@okaxis, 9449724415@ptaxis, rahulhaieere@ptyes, sambagottapu@okicici ಸೇರಿದಂತೆ ಹಲವಾರು ಖಾತೆಗಳಿಗೆ ಹಣ ಕಳುಹಿಸಿದ ನಂತರ, ಇದು ವಂಚನೆ ಎಂದು ತಿಳಿದುಬಂದಿತು. ಒಟ್ಟು ₹1,47,900 ಕಳೆದುಕೊಂಡ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮುಂದೆ ಓದಿ..

ಟೆಲಿಗ್ರಾಂನಲ್ಲಿ ಪಾರ್ಟ್‌ಟೈಮ್ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ

ಟೆಲಿಗ್ರಾಂನಲ್ಲಿ ಪಾರ್ಟ್‌ಟೈಮ್ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ ಬೆಂಗಳೂರು ಆಗಸ್ಟ್ 16 2025 ಟೆಲಿಗ್ರಾಂ ಆಮಿಷವೊಡ್ಡಿ ಮಹಿಳೆಯೊಬ್ಬರ ಖಾತೆಯಿಂದ ₹1.47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 11, 2025 ರಂದು CGI Co. Ltd. ಎಂಬ ಐಡಿಯಿಂದ ದೂರುದಾರರಿಗೆ “ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬ್ ಮಾಡಿದರೆ ಹಣ ನೀಡಲಾಗುತ್ತದೆ” ಎಂಬ ಸಂದೇಶವೊಂದು ಬಂದಿತ್ತು. ನಂಬಿದ ಅವರು ಮೊದಲು ನೋಂದಣಿ ಶುಲ್ಕ, ಬಳಿಕ ಜಿ.ಎಸ್.ಟಿ. ಹೆಸರಿನಲ್ಲಿ ಹಣ ವರ್ಗಾಯಿಸಿದರು. maruthicargo@kphdfc, manasacandu-1@okicici, lucky77chintu-1@okaxis, 9449724415@ptaxis, rahulhaieere@ptyes, sambagottapu@okicici ಸೇರಿದಂತೆ ಹಲವಾರು ಖಾತೆಗಳಿಗೆ ಹಣ ಕಳುಹಿಸಿದ ನಂತರ, ಇದು ವಂಚನೆ ಎಂದು ತಿಳಿದುಬಂದಿತು. ಒಟ್ಟು ₹1,47,900 ಕಳೆದುಕೊಂಡ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ಶಿಕ್ಷಕಿಯ ವಿರುದ್ಧ ಕಿರುಕುಳ – ಪ್ರಕರಣ ದಾಖಲು

ಬೆಂಗಳೂರು: ಆಗಸ್ಟ್ 16 2025ಹೆಬ್ಬಾಳದಲ್ಲಿರುವ ಕೆ.ಪಿ.ಎಸ್ ಶಾಲೆಯೊಬ್ಬ ಶಿಕ್ಷಕಿಯು, ತನ್ನ ಮೇಲೆ ಕಿರುಕುಳ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ವಿಶ್ವನಾಥ್ ಎಂಬ ವ್ಯಕ್ತಿಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಪ್ರಕಾರ, ಆರೋಪಿಯು ಸುಮಾರು ಎಂಟು ತಿಂಗಳಿನಿಂದ ಪರಿಚಯವಾಗಿದ್ದು, ಜುಲೈ 18ರಿಂದ ಶಿಕ್ಷಕಿಯ ಮನೆಯಲ್ಲಿ ಹಾರ್ನ್ ಹೊಡೆದು ತೊಂದರೆ ನೀಡುತ್ತಿದ್ದನು ಮತ್ತು ಕೆಲಸಕ್ಕೆ ಹೋಗುವಾಗ ಪ್ರತಿದಿನ ಹಿಂಬಾಲಿಸುತ್ತಿದ್ದನು. ಆಗಸ್ಟ್ 1ರಂದು ಸಂಜೆ 5 ಗಂಟೆಗೆ, ಶಿಕ್ಷಕಿ ಮತ್ತು ಅವರ ಮಗಳನ್ನು ಹಿಂಬಾಲಿಸಿ ಬಂದು ಆವಾಚ್ಯ ಶಬ್ದಗಳಿಂದ ಬೈದು ಬಾಯಿಂದ ಉಗುಳಿದ್ದಾನೆ. ಪರಿಚಯದ ಆರಂಭದಲ್ಲಿ ಶಿಕ್ಷಕಿಯ ವೈಯಕ್ತಿಕ ಫೋಟೋಗಳನ್ನು ತೆಗೆದುಕೊಂಡಿದ್ದ ಆರೋಪಿಯು, ಅವುಗಳನ್ನು ಅವರ ತಂಗಿಯ ಮೊಬೈಲ್‌ಗೆ ಕಳುಹಿಸಿ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಸ್ಟ್ 7ರಂದು ಶಿಕ್ಷಕಿಯ ಮಾಜಿ ಪತಿಯೊಂದಿಗೆ ನಡೆದ ಮಾತುಕತೆಯ ಆಡಿಯೋವನ್ನು ವಾಟ್ಸ್‌ಆಪ್ ಮೂಲಕ…

ಮುಂದೆ ಓದಿ..
ಸುದ್ದಿ 

ಮಹಾಭಾರತದ ಕೃಷ್ಣ ಎಂಬ ವ್ಯಕ್ತಿತ್ವದ ಸುತ್ತ………..

ಮಹಾಭಾರತದ ಕೃಷ್ಣಎಂಬ ವ್ಯಕ್ತಿತ್ವದ ಸುತ್ತ……….. ಎಂತಹ ಅತ್ಯದ್ಭುತ ಪಾತ್ರವದು, ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ ಅಭಿಪ್ರಾಯ ಮೂಡಿಸುವ ಪಾತ್ರವದು……. ಅರಿಷಡ್ವರ್ಗಗಳು, ನವ ರಸಗಳು, ಅರವತ್ನಾಲಕ್ಕು ವಿದ್ಯೆಗಳು ಸೇರಿ ಎಲ್ಲಾ ರೀತಿಯ ಅನುಭವಗಳು ಅದರಲ್ಲಿ ಅಡಕವಾಗಿದೆ. ಬಹುತೇಕ ಸಕಲಕಲಾವಲ್ಲಬ…….. ಹೇಗೆ ಅದೊಂದು ಅದ್ಬುತ ಪಾತ್ರವೋ, ಶಕ್ತಿಶಾಲಿಯೋ ಹಾಗೆಯೇ ಕೃಷ್ಣನ ಪ್ರತಿ ನಡೆಯನ್ನು ಅಷ್ಟೇ ತೀಕ್ಷ್ಣವಾಗಿ ಪ್ರಶ್ನಿಸುತ್ತಾ ಸಾಗಬಹುದು. ಕೆಲವುಗಳಿಗೆ ನಿರ್ದಿಷ್ಟ – ಖಚಿತ ಉತ್ತರ, ಮತ್ತೆ ಕೆಲವು ವೇಳೆ ಪಲಾಯನ ವಾದ, ಇನ್ನೊಮ್ಮೆ ಜನ್ಮಾಂತರಗಳಲ್ಲಿ ಅಡಗುವುದು, ಮಗದೊಮ್ಮೆ ಆ ಕ್ಷಣದ ಸತ್ಯ, ಮತ್ತೊಮ್ಮೆ ಗೊಂದಲದ ಸಮರ್ಥನೆ, ನಾನೇ ಸರಿ ಎಂಬ ಹಠ, ಸ್ವಲ್ಪ ವಾಸ್ತವವಾದಿ, ಹೆಚ್ಚು ದುರಹಂಕಾರಿ, ಅಪಾರ ತಂತ್ರಗಳು ಹಾಗೆಯೇ ಉದಾರಿ, ತ್ಯಾಗಿ ಇನ್ನೂ ಎಲ್ಲಾ ಭಾವಗಳ ಸಂಗಮ ಈ ಕೃಷ್ಣ….. ಇತರ ಕೆಲವು…

ಮುಂದೆ ಓದಿ..
ಸುದ್ದಿ 

ಸಾಂಕೇತಿಕವಾಗಿ ನಾಯಿಗಳು ಯಾರು ?ಊಹಿಸಿ……….

ಸಾಂಕೇತಿಕವಾಗಿ ನಾಯಿಗಳು ಯಾರು ?ಊಹಿಸಿ………. ಬೀದಿ ನಾಯಿಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಚರ್ಚೆಗಳು ಆಗುತ್ತಿರುವಾಗ ಕಾಡಿನ ನಾಯಿಯ ಪ್ರವೇಶ…… ಕಾಡಿನ ನಾಯಿಯೊಂದು ಆಹಾರ ಹುಡುಕುತ್ತಾ ದಾರಿ ತಪ್ಪಿಸಿಕೊಂಡು ನಾಡಿಗೆ ಬಂದಿದೆ…. ‌.‌‌‌‌‌…….‌ ಮಳೆಗಾಲದ ಈ ಸಮಯದಲ್ಲಿ ಅದಕ್ಕೆ ಕಾಡಿನಲ್ಲಿ ಆಹಾರದ ಕೊರತೆ ಕಾಡಿತು. ಬಹುತೇಕ ಮಾಂಸಹಾರಿ ಪ್ರಾಣಿ ನಾಯಿ……….. ರಾತ್ರಿಯೆಲ್ಲಾ ಸಂಚರಿಸುತ್ತಾ ಯಾವುದೋ ಹಾದಿ ಹಿಡಿದು ಸಾಗುತ್ತಿರುವಾಗ ಆಕಸ್ಮಿಕವಾಗಿ ಕಾಡು ಕೊನೆಯಾಗಿ ಬೆಳಗಿನ ಹೊತ್ತಿಗೆ ತನಗರಿವಿಲ್ಲದೆ ಮತ್ತು ತಾನೆಂದೂ ನೋಡಿರದ ನಗರ ಪ್ರವೇಶಿಸಿತು…………. ಕಾಡ ನಾಯಿಯಾದರೂ ಇತ್ತೀಚಿನ ವರ್ಷಗಳಲ್ಲಿ ಆಹಾರ ಸರಿಯಾಗಿ ಸಿಗದೆ ಸ್ವಲ್ಪ ಬಡಕಲು ದೇಹದ ನಾಯಿ ಆಟದ ಮೈದಾನದಲ್ಲಿ ತನ್ನದೇ ನಾಯಿ ಪಂಗಡದ ವಿವಿಧ ಆಕಾರದ ದಷ್ಟಪುಷ್ಟ ನಾಯಿಗಳು ಸಂಚರಿಸುತ್ತಿರುವುದನ್ನು ನೋಡಿ ಖುಷಿಯಾಯಿತು. ತಾನು ಸರಿಯಾದ ದಾರಿಯಲ್ಲೇ ಇದ್ದೇನೆ ಎಂದು ಭಾವಿಸಿ ಅದರ ಹತ್ತಿರ ಹೋಗುತ್ತಿದ್ದಂತೆ ಅದರ ಮಾಲೀಕರು ಕಿರುಚುತ್ತಾ ಕೈಯಲ್ಲಿದ್ದ ಕೋಲಿನಿಂದ…

ಮುಂದೆ ಓದಿ..
ಸುದ್ದಿ 

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ……..

ತಾಯ್ನೆಲ……. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ…….. 78 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ, ಅತ್ಯಾಕರ್ಷಕ ಭರತ ಖಂಡವೇ,……. ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ.ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ….. ಸ್ವಾತಂತ್ರ್ಯ ಪಡೆದ 78 ವರ್ಷಗಳು …… ಸಂವಿಧಾನ ಸ್ವೀಕರಿಸಿ 75 ವರ್ಷಗಳು…… ಆದರೆ,ನಿನ್ನ ಅಸ್ತಿತ್ವ ಸಹಸ್ರಾರು ವರ್ಷಗಳ ನಿರಂತರ ಚಲನೆಯಿಂದ ಕೂಡಿದೆ…… ನನ್ನ ಭರತ ಖಂಡವೇ ಏನೆಂದು ವರ್ಣಿಸಲಿ – ಎಷ್ಟೆಂದು ವರ್ಣಿಸಲಿ ನಿನ್ನನ್ನು …… ಪದಗಳು – ಭಾವಗಳು – ಕಲ್ಪನೆಗಳಿಗೂ ನಿಲುಕದ ನಿನ್ನನ್ನು ಹೇಗೆಂದು ಹಿಡಿದಿಡಲಿ ಈ ಪುಟ್ಟ ಹೃದಯದಲಿ…. ರಾಮಾಯಣ – ಮಹಾಭಾರತ – ಭಗವದ್ಗೀತೆಗಳೆಂಬ – ಅಸಾಮಾನ್ಯ ಬೃಹತ್ ಗ್ರಂಥಗಳು ನಿನ್ನಲ್ಲೇ ಸೃಷ್ಟಿಯಾದವು…….. ಗೌತಮ ಬುದ್ಧ – ಮಹಾವೀರರೆಂಬ ಚಿಂತನ ಚಿಲುಮೆಗಳಿಗೆ ಜನ್ಮ ನೀಡಿದ್ದು ನೀನೇ……. ಹಿಮಗಿರಿಯ ಸೌಂದರ್ಯ – ನಿತ್ಯ ಹರಿದ್ವರ್ಣದ ಕಾಡುಗಳು – ತುಂಬಿ ತುಳುಕುವ ನದಿಗಳು…

ಮುಂದೆ ಓದಿ..