ಸುದ್ದಿ 

ಟವರ್ ಹಿಂಭಾಗದಿಂದ ಎಲೆಕ್ಟ್ರಿಕಲ್ ಕೇಬಲ್ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು, ಜುಲೈ 17: 2025 ನಗರದ ಒಂದು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ಟವರ್ ಹಿಂಭಾಗದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕಲ್ ಕೇಬಲ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ರೋಬಿನ್ ಆವರ ಪ್ರಕಾರ, ಅವರು ತಮ್ಮ ನಿವಾಸದಲ್ಲಿದ್ದಾಗ 13/07/2025 ರಂದು ಬೆಳಿಗ್ಗೆ ಸುಮಾರು 06:00 ಗಂಟೆಗೆ ಟವರ್-ಡಿ ಹಿಂಭಾಗದಿಂದ ಅಂದಾಜು 500ರಿಂದ 600 ಮೀಟರ್ ಉದ್ದದ ಎಲೆಕ್ಟ್ರಿಕಲ್ ಕೇಬಲ್‌ನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕೇಬಲ್‌ನ ಮೌಲ್ಯವನ್ನು ಸುಮಾರು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ದೂರುದಾರರು ಈ ಬಗ್ಗೆ ಸುತ್ತಮುತ್ತ ಮಾಹಿತಿ ಕಲೆಹಾಕಿದರೂ ಯಾವುದೇ ಪತ್ತೆಯಾಗದೆ ಹಿನ್ನಲೆಯಲ್ಲಿ ಕೊನೆಗೆ ಪೊಲೀಸರು ಕೈಜೋಡಿಸಲು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಮುಂದೆ ಓದಿ..
ಸುದ್ದಿ 

ನಕಲಿ ಪರಿಚಯ ನೀಡಿ ನಿವೃತ್ತ ಸಿಐಎಸ್ಎಫ್ ಅಧಿಕಾರಿ ಬಳಿ ₹45,000 ವಂಚನೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 17:2025 ನಗರದಲ್ಲಿ ಮತ್ತೊಂದು ಆನ್‌ಲೈನ್ ವಂಚನೆ ಬೆಳಕಿಗೆ ಬಂದಿದೆ. ನಿವೃತ್ತ ಸಿಐಎಸ್ಎಫ್ ನೌಕರರೊಬ್ಬರಿಗೆ ತಮ್ಮನ್ನು “ಶರ್ಮ” ಎಂಬ ಸಹೋದ್ಯೋಗಿಯಾಗಿ ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರು ₹45,000 ವಂಚಿಸಿದ ಘಟನೆ ನಡೆದಿದೆ. ಪ್ರಕಾಶ್ ಕುಮಾರ್ ನಾಯಕ್ ಅವರು ನೀಡಿದ ಮಾಹಿತಿಯ ಪ್ರಕಾರ, ಜುಲೈ 11 ರಂದು ಸಂಜೆ 10:30 ಗಂಟೆಗೆ ಅವರ ಮೊಬೈಲಿಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನ ಫೋನ್ ಕೆಲಸ ಮಾಡುತ್ತಿಲ್ಲ ಎಂದು ಕಾರಣ ನೀಡಿ ತಕ್ಷಣ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದ. ಆತನು ನೀಡಿದ ಮೊಬೈಲ್ ನಂಬರ್ 8955492652 ಗೆ ಪಿರ್ಯಾದಿದಾರರು ಒಟ್ಟು ₹45,000 ಹಣವನ್ನು ನಾಲ್ಕು ಹಂತಗಳಲ್ಲಿ ಜುಲೈ 12 ರಂದು ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿದರು. ಹಣ ವರ್ಗಾವಣೆಯ ನಂತರ, ಪ್ರಕಾಶ್ ಕುಮಾರ್ ತಮ್ಮ ಖಾತೆ ಪರಿಶೀಲನೆ ನಡೆಸಿದಾಗ ಯಾವುದೇ ಹಣದ ಸ್ವೀಕೃತಿ ಇಲ್ಲದೆ, ಕರೆ…

ಮುಂದೆ ಓದಿ..
ಸುದ್ದಿ 

ಅಪರಿಚಿತ ವ್ಯಕ್ತಿಯಿಂದ ಕ್ರೆಡಿಟ್ ಕಾರ್ಡ ಮೋಸ ಹೂಡಿಕೆದಾರರಿಂದ ₹70,000 ಕಳೆದು ಹೋದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 17– 2025 ನಗರದ ನಿವಾಸಿಯೊಬ್ಬರಿಗೆ ಅವರ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ರೂಪಾಯಿ ರೂಪದಲ್ಲಿ ಪರಿವರ್ತಿಸಿ ನೀಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿಯೊಬ್ಬರು ಸೈಬರ್ ಮೋಸ ಮಾಡಿದ್ದಾರೆ. ರಮೇಶ್ ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 07.06.2025 ರಂದು ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಮ್ಮನ್ನು ಬ್ಯಾಂಕ್ ಪ್ರತಿನಿಧಿಯಾಗಿ ಪರಿಚಯಿಸಿಕೊಂಡು, “ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಕ್ಯಾಶ್ ರೂಪದಲ್ಲಿ ಕೊಡಲಾಗುತ್ತದೆ, ದಯವಿಟ್ಟು OTP ಅನ್ನು ನೀಡಿ” ಎಂದು ತಿಳಿಸಿದ್ರು. ಭದ್ರತಾ ವಿವರಗಳನ್ನು ನೀಡಿದ ಬಳಿಕ, ವಿವಿಧ ದಿನಗಳಲ್ಲಿ ₹25,737.50, ₹18,424.80 ಮತ್ತು ₹70,527.22 ಮೊತ್ತಗಳನ್ನು ದ್ದೋಷಿಗಳಿಂದ ಡೆಬಿಟ್ ಮಾಡಲಾಗಿದೆ. ಮತ್ತೆ ಕರೆ ಮಾಡಿದಾಗ, “ನಮ್ಮ ಟೇಕ್ನಿಕಲ್ ಸಮಸ್ಯೆ ಇದೆ, ಎರಡು ದಿನಗಳ ಒಳಗೆ ನಿಮ್ಮ ಲಿಮಿಟ್ ಹೆಚ್ಚಾಗುತ್ತದೆ ಮತ್ತು ಹಣ ವಾಪಸ್ ಆಗುತ್ತದೆ” ಎಂದು ತಿಳಿಸಿದ್ರು. ಆದರೆ ನಂತರ ಯಾವುದೇ ಹಣ ವಾಪಸ್…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 14 ವರ್ಷದ ಬಾಲಕಿ ಮೇಘನಾ ಕಾಣೆ – ತಾಯಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರು 17 2025 ನಗರದ BEL ಕಂಪನಿಯ ಕ್ಯಾನ್ಟೀನ್‌ನಲ್ಲಿ ಕೆಲಸಮಾಡುವ ಮಹಿಳೆಯ ಮಗಳು ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿ ಮೇಘನಾ 2025ರ ಜುಲೈ 14ರಂದು ಮನೆಗೆ ಮರಳದೆ ಕಾಣೆಯಾದ ಬಗ್ಗೆ ತಾಯಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಣೇಶ್ ಜಿ ಅವರ ಪ್ರಕಾರ, ಆ ದಿನ ಬೆಳಗ್ಗೆ 6:30ರ ವೇಳೆಗೆ ಎಂದಿನಂತೆ ಮನೆ ಕೆಲಸಗಳನ್ನು ಪೂರ್ಣಗೊಳಿಸಿ ಹೊರಟಿದ್ದ ತಾಯಿ ಮಧ್ಯಾಹ್ನ 3:00 ಗಂಟೆಗೆ ಮನೆಗೆ ಹಿಂತಿರುಗಿದಾಗ, ತನ್ನ ಮಗಳು ಮನೆಯಲ್ಲಿಲ್ಲ ಎಂಬುದು ಗಮನಕ್ಕೆ ಬಂದಿದೆ. ತಕ್ಷಣವೇ ಆಕೆ ಆಸ್ಪತ್ರೆಗೆ, ಶಾಲೆಗೆ, ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ತೆರಳಿ ಹುಡುಕಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ತಾಯಿ ಆತಂಕಗೊಂಡು ಕೂಡಲೇ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಮನೆಮಂದಿ ಹಾಗೂ ನೆರೆಹೊರೆಯವರಿಂದ ಕೇಳಿದರೂ ಮೇಘನಾ ಎಲ್ಲಿ ಹೋದಾಳೆ ಎಂಬುದರ ಬಗ್ಗೆ ಯಾವುದೇ ಸುಳಿವು…

ಮುಂದೆ ಓದಿ..
ಸುದ್ದಿ 

ಯಲಹಂಕ ಗಸ್ತಿನಲ್ಲಿ ಗಾಂಜಾ ಮಾರಾಟ ಗುತ್ತಿಗೆ: ಸಿಸಿಬಿ ದಾಳಿ, ಆರೋಪಿಗಳ ಬಂಧನ

Taluknewsmedia.com

Taluknewsmedia.comಬೆಂಗಳೂರು: ಜುಲೈ 16, 2025 ಬೆಂಗಳೂರಿನ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ, ನಗರ ಸಿಸಿಬಿ ಮಾದಕ ದ್ರವ್ಯ ನಿಯಂತ್ರಣ ದಳದ ಪೊಲೀಸರು ಅಪಾರ ಪ್ರಮಾಣದ ಗಾಂಜಾ ಸಾಗಾಣಿಕೆ ಹಾಗೂ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಕ ದ್ರವ್ಯ ದಳದ ಇನ್‌ಸ್ಪೆಕ್ಟರ್ ಮಂಜಪ್ಪ ಅವರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಳಗ್ಗೆ ಸುಮಾರು 11:20 ರ ಸಮಯದಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದರು. ಆರೋಪಿಗಳು ತಮ್ಮ ಜೊತೆಗೆ ಇರಿಸಿಕೊಂಡಿದ್ದ 20-25 ಕಿಲೋಗ್ರಾಂ ತೂಕದ ಬ್ಯಾಗ್‌ನಲ್ಲಿ ಗಾಂಜಾ ಇಟ್ಟುಕೊಂಡಿದ್ದು, ಅದನ್ನು ರೈಲಿನಲ್ಲಿ ಸಾಗಿಸಿ ಬೆಂಗಳೂರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳು ಓಯಾಗಬುದೊಂಗ ಹಾಗೂ ಇನ್ನೊಬ್ಬ ವ್ಯಕ್ತಿಯಾಗಿದ್ದು, ಅವರು ಮಹತ್ವದ ಮಾದಕ ದ್ರವ್ಯ ಸಾಗಾಣಿಕೆಯಲ್ಲಿ ತೊಡಗಿರುವ ಸಾಧ್ಯತೆ ಇದೆ. ಯಲಹಂಕ ಪೊಲೀಸರು…

ಮುಂದೆ ಓದಿ..
ಸುದ್ದಿ 

ಚಿನ್ನಾಭರಣ ಕಳ್ಳತನ: ಮನೆ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಆಭರಣ ಮಿಸ್ಸಿಂಗ್

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ ಜುಲೈ 16:2025 ವಿಜಯನಗರ ಗ್ರಾಮದಲ್ಲಿ ದಿನಾಂಕ 13-07-2025 ರಂದು ದಿನದ ಬೆಳಗ್ಗೆ ಸಂಭವಿಸಿದ ಕಳ್ಳತನದ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮನೆ ಮಾಲೀಕರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ದುಷ್ಕರ್ಮಿಗಳು ಮನೆ ಬಾಗಿಲು ಮುರಿದು ಒಳನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ರಾಜಮ್ಮ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ಬೆಳಗ್ಗೆ 07:15 ಕ್ಕೆ ಕೆಲಸಕ್ಕೆ ಹೋಗಿದ್ದಾಗ ಮನೆಗೆ ತಾಯಿ ಅಕ್ಕಯಮ್ಮ, ಅಜ್ಜಿ ಮುನಿಯಮ್ಮ ಇದ್ದರು. ಮಧ್ಯಾಹ್ನ 02:20ರ ವೇಳೆಗೆ ಮನೆಗಿನ ಎಲ್ಲರೂ ಊರಿನ ಸಂಬಂಧಿಕರ ಜನ್ಮದಿನ ಪಾರ್ಟಿಗೆ ಹೋಗಿದ್ದರು. ಸಂಜೆ 04:00ಕ್ಕೆ ಮನೆಗೆ ವಾಪಸು ಬಂದಾಗ, ಬಾಗಿಲಿನ ಚಿಲಕ ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತು. ಮನೆ ಒಳಗೆ ಪರಿಶೀಲನೆ ನಡೆಸಿದಾಗ, ಬೀರುವಿನ ಲಾಕರ್ ಮುರಿಯಲಾಗಿದ್ದು, ಒಳಗೆ ಇಟ್ಟಿದ್ದ ಬಹುಮೌಲ್ಯದ ಚಿನ್ನಾಭರಣಗಳು ಕಳವಾಗಿದ್ದವು. ಕಳ್ಳರು ಕದ್ದ್ದುಕೊಂಡು ಹೋದ ವಸ್ತುಗಳ ವಿವರ ಹೀಗಿದೆ: 11…

ಮುಂದೆ ಓದಿ..
ಸುದ್ದಿ 

ವಾಟ್ಸಪ್ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಹಣದ ಮೋಸ: ರೂ. 1.90 ಲಕ್ಷ ವಂಚನೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 16: 2025 ವಾಟ್ಸಪ್ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಜನರನ್ನು ಮೋಸಗೊಳಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅನಾಮಿಕ ವ್ಯಕ್ತಿಯೊಬ್ಬರು ಹಲವು ನಕಲಿ ಖಾತೆಗಳ ಮೂಲಕ ಹಣ ಕೇಳಿ, ಒಟ್ಟು ರೂ. 1,90,000/- ವಂಚಿಸಿದ್ದಾರೆ. ರೋಹಿನಿ ಬೋಪಣ್ಣ ಅವರು ನೀಡಿದ ದೂರಿನ ಪ್ರಕಾರ, M8929185981 ಎಂಬ ವಾಟ್ಸಪ್ ಸಂಖ್ಯೆಯಿಂದ, ಮತ್ತು @ssamishka7477, @financedepartment725, @dinesh9888 ಎಂಬ ಖಾತೆಗಳನ್ನು ಬಳಸಿಕೊಂಡು ಹಣದ ಬಗ್ಗೆ ಆಮಿಷವಿಡಲಾಗಿತ್ತು. ವಿವಿಧ ಅವಕಾಶಗಳು, ಸಾಲದ ಮಂಜೂರಾತಿ, ಸಬ್ಸಿಡಿ, ಅಥವಾ ನಕಲಿ ಉದ್ಯೋಗಗಳ ಹೆಸರಲ್ಲಿ ಹಂತ ಹಂತವಾಗಿ ಹಣ ಕಳೆಯಲಾಗಿದ್ದು, ಮೊತ್ತಗಳು 700/-, 910/-, 3000/-, 10,500/-, 29,500/-, ಹಾಗೂ 1,00,000/- ಸೇರಿ ಒಟ್ಟು 1.90 ಲಕ್ಷ ರೂಪಾಯಿ ಕಳಿಸಲಾಗಿದೆ. ಈ ಎಲ್ಲಾ ಹಣ ವರ್ಗಾವಣೆಗಳು 13-07-2025 ರಂದು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ನಡೆದಿದ್ದು, ನಂತರ ಯಾವುದೇ ಹಣ ವಾಪಸ್ಸಾಗಿಲ್ಲ. ಸಂಬಂಧಿಸಿದ ವ್ಯಕ್ತಿಗಳು…

ಮುಂದೆ ಓದಿ..
ಸುದ್ದಿ 

ಜಮೀನಿನ ವಿವಾದದಿಂದ ರಸ್ತೆಯಲ್ಲಿ ಘರ್ಷಣೆ – 9 ಮಂದಿ ಬಂಧನ

Taluknewsmedia.com

Taluknewsmedia.comಬೆಂಗಳೂರು, ಜುಲೈ 16:2025 ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಜಮೀನಿನ ಸಂಬಂಧಿತ ವಿಚಾರದ ಹಿನ್ನೆಲೆಯಲ್ಲಿ ಸಂಬಂಧಿಕರೇ ಒಬ್ಬರ ಮೇಲೆ ಒಬ್ಬರು ಹಲ್ಲೆ ನಡೆಸಿದ ಪ್ರಕರಣ ಸಂಭವಿಸಿದ್ದು, ಒಟ್ಟು 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ನಂದೀಶ್ ಹಾಗೂ ಪಿಸಿ ನಿಸ್ಸಾರ್ ಖಾನ್ ಅವರು ಬೆಳಿಗ್ಗೆ 8.30ರ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಗಸ್ತು ಕಾರ್ಯದೊಂದಿಗೆ ಸಂಭ್ರಮ ಕಾಲೇಜು ಸಮೀಪದ ರಸ್ತೆಯ ಮೂಲಕ ಅಂಬಾ ಭವಾನಿ ದೇವಸ್ಥಾನದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸಾರ್ವಜನಿಕ ರಸ್ತೆಯಲ್ಲಿ 8-9 ಮಂದಿ ಎರಡು ಗುಂಪುಗಳಾಗಿ ಕೈಕಾಲು ಬೀಸಿ ಜಗಳವಾಡುತ್ತಿದ್ದ ದೃಶ್ಯ ಗಮನಕ್ಕೆ ಬಂದಿದೆ. ತಕ್ಷಣ ಘಟನಾ ಸ್ಥಳಕ್ಕೆ ಸೇರಿ ಜಗಳ ತಡೆಯುವಲ್ಲಿ ಸಕ್ರಿಯರಾದ ಅವರು, ಕೂಡಲೇ ಹೊಯ್ಸಳ 169 ವಾಹನದ ಸಹಾಯದಿಂದ ಎಸ್‌ಐ ಸರೋಜ ಹಾಗೂ ಎಪಿಸಿ ರುದ್ರೇಶ್ ಫಿರಂಗಿ…

ಮುಂದೆ ಓದಿ..
ಸುದ್ದಿ 

ವಿದ್ಯಾರಣ್ಯಪುರದಲ್ಲಿ 19 ವರ್ಷದ ಯುವತಿ ನಾಪತ್ತೆ – ತಾಯಿ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 15:2025 ರಾಜಾಜಿನಗರದ ESI ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದ ತಾಯಿ ಮತ್ತು ಮಗ ಮನೆಗೆ ಮರಳಿದಾಗ 19 ವರ್ಷದ ಯುವತಿ ಕಾಣೆಯಾಗಿರುವ ಘಟನೆ ವಿದ್ಯಾರಣ್ಯಪುರದಲ್ಲಿದೆ. ಯುವತಿಯ ತಾಯಿ ಈ ಕುರಿತು ವಿದ್ಯಾರಣ್ಯಪುರ ಪೋಲಿಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಶೀಲಾ ಅವರು ತನ್ನ ಪತಿ, ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೆಂಗಳೂರಿನ ವಿದ್ಯಾರಣ್ಯಪುರ ಪ್ರದೇಶದಲ್ಲಿ ವಾಸವಿದ್ದು, ಆರೋಗ್ಯ ಸಮಸ್ಯೆಯಿಂದಾಗಿ ಉದ್ಯೋಗ ತ್ಯಜಿಸಿದ್ದಾರಂತೆ. ಅವರ ಮಗ ಬ್ರಿಂದಾವನ ಸ್ಟೇಟಿಂಗ್‌ನಲ್ಲಿ ಭಾಗಕಾಲಿಕವಾಗಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಮೊದಲ ಮಗಳು ಬೀಬಿ ಕೇರ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಜುಲೈ 11ರಂದು ಬೆಳಿಗ್ಗೆ 11 ಗಂಟೆಗೆ ತಾಯಿ ಮತ್ತು ಮಗ ಆಸ್ಪತ್ರೆಗೆ ತೆರಳಿದಾಗ, ಅವರ ಎರಡನೇ ಮಗಳಾದ ಶೃತಿ ಪಿ (19) ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ 12 ಗಂಟೆ ಸುಮಾರಿಗೆ ತಾಯಿ ಶೃತಿಗೆ ಕರೆ ಮಾಡಿದಾಗ, “ವಿದ್ಯಾರಣ್ಯಪುರ 1ನೇ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಆಟೋರಿಕ್ಷಾ ಕಳ್ಳತನ: ₹1 ಲಕ್ಷ ಮೌಲ್ಯದ ವಾಹನ ಕಣ್ಮರೆಯಾಗಿದೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 14:2025 ನಗರದ ಯಲಹಂಕ ಉಪನಗರದ ಅಟ್ಟೂರು ಮುನೇಶ್ವರ ಲೇಔಟ್‌ನಿಂದ ಆಟೋರಿಕ್ಷಾವೊಂದು ಕಳ್ಳತನವಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಸಂಬಂಧಿತ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಶಿವಕುಮಾರ್ ಅವರ ಪ್ರಕಾರ, ಅವರು ತಮ್ಮ KA-02-AF-5363 ನಂ ಬೇರಳೆ ಆಟೋರಿಕ್ಷಾವನ್ನು ಎರಡು ತಿಂಗಳ ಹಿಂದೆ ಬಾಡಿಗೆಗೆ ನೀಡಿದ್ದರು. ದಿನಾಂಕ 28/06/2025 ರಂದು ರಾತ್ರಿ 11 ಗಂಟೆಯ ನಂತರ, ಆಟೋನು ಮುನೇಶ್ವರ ಲೇಔಟ್‌ನಲ್ಲಿ ನಿಲ್ಲಿಸಲಾಗಿತ್ತು. ಆದರೆ ನಂತರದಿಂದ ಅದು ಕಾಣೆಯಾಗಿದೆ. ಅನೇಕ ಕಡೆಗಳಲ್ಲಿ ಹುಡುಕಿದರೂ ಆಟೋ ಪತ್ತೆಯಾಗದ ಹಿನ್ನೆಲೆ, ಜುಲೈ 1 ರಂದು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಕುಮಾರ ಈ ಆಟೋವನ್ನು ಯಾರೋ ಕಳ್ಳರು ಕದಿದುಕೊಂಡು ಹೋಗಿದ್ದಾರೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕಳ್ಳತನವಾದ ಆಟೋರಿಕ್ಷಾ ವಿವರಗಳು: ನೋಂದಣಿ ಸಂಖ್ಯೆ: KA-02-AF-5363 ಚಾಸಿ ನಂ: MD2A45AJ7GWB09787 ಇಂಜಿನ್ ನಂ: AJJWGB14108 ಮಾದರಿ: 2016 RE COMPACT LPG…

ಮುಂದೆ ಓದಿ..