ಗೋವಾ ಅಗ್ನಿ ಅವಘಡದಲ್ಲಿ ಬೆಂಗಳೂರು ಮೂಲದ ಯುವಕ ಸೇರಿ 25 ಮಂದಿ ಸಾವು…
Taluknewsmedia.comಗೋವಾ ಅಗ್ನಿ ಅವಘಡದಲ್ಲಿ ಬೆಂಗಳೂರು ಮೂಲದ ಯುವಕ ಸೇರಿ 25 ಮಂದಿ ಸಾವು… ಗೋವಾದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಟ್ಟು 25 ಮಂದಿ ಜೀವ ಕಳೆದುಕೊಂಡಿರುವ ಘಟನೆ ಆತಂಕ ಮೂಡಿಸಿದೆ. ಮೃತಪಟ್ಟವರ ಪೈಕಿ ಬೆಂಗಳೂರಿನ ಥಣಿಸಂದ್ರ–ಹೆಗಡೆನಗರ ಮೂಲದ ಇಶಾಕ್ (25) ಎಂಬ ಯುವಕನೂ ಒಬ್ಬರು. ನಾಲ್ವರು ಸ್ನೇಹಿತರೊಂದಿಗೆ ಭಾನುವಾರ ಮಧ್ಯಾಹ್ನ ಗೋವಾ ಪ್ರವಾಸಕ್ಕೆ ತೆರಳಿದ್ದ ಇಶಾಕ್ ಅಪಘಾತದಲ್ಲಿ ದಹನಗೊಂಡಿದ್ದಾರೆ. ಅವರ ಮೃತದೇಹವನ್ನು ಡಿಸೆಂಬರ್ 7ರ ರಾತ್ರಿ ಬೆಂಗಳೂರಿಗೆ ತರಲಾಗುತ್ತಿದೆ. ಅಕಸ್ಮಿಕ ಬೆಂಕಿಗಾಹುತಿಯಾದವರು… ಉತ್ತರ ಗೋವಾದ ಅರ್‌ಪೋರಾ ಪ್ರದೇಶದಲ್ಲಿದ್ದ ನೈಟ್ ಕ್ಲಬ್‌ನಲ್ಲಿ ಭಾನುವಾರ ಮುಂಜಾನೆ ಬೆಂಕಿ ಹೊತ್ತಿಕೊಂಡು ಮಿಂಚಿನ ವೇಗದಲ್ಲಿ ವ್ಯಾಪಿಸಿತು. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿ ಎಂದು ತಿಳಿದುಬಂದಿದೆ. ಅವರಲ್ಲೂ ಮೂವರು ಮಹಿಳೆಯರು ಸೇರಿದ್ದಾರೆ. ಜೊತೆಗೆ ಮೂರರಿಂದ ನಾಲ್ಕು ಮಂದಿ ಪ್ರವಾಸಿಗರೂ ಮೃತಪಟ್ಟಿರುವುದು ದೃಢಪಟ್ಟಿದೆ. ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯವೇ ಕಾರಣ? ಪ್ರಾಥಮಿಕ ತನಿಖೆಯ ಪ್ರಕಾರ,…
ಮುಂದೆ ಓದಿ..
