ಅಂಕಣ 

ಯೋಗ ಮತ್ತು ಧ್ಯಾನ,ಧೀರ್ಘ ಲೇಖನ ಓದುವ ತಾಳ್ಮೆಯೂ ಇರಲಿ….

Taluknewsmedia.com

Taluknewsmedia.comಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು……..ಕಾಯಕವೇ ಕೈಲಾಸ ಎಂದು ತನ್ನ ಶ್ರಮದಿಂದಲೇ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಬದುಕನ್ನು ಸರಳವಾಗಿ, ಸಹಜವಾಗಿ, ಪ್ರಕೃತಿಯ ನಿಷ್ಠೆಯಿಂದ ಬದುಕು ಸಾಗಿಸುತ್ತಿದ್ದರೆ ಅದೇ ಖಂಡಿತವಾಗಲೂ ಅತ್ಯುತ್ತಮ ಜೀವನ ಶೈಲಿ. ಬಹುಶಃ ನಾಗರಿಕತೆಯ ಪ್ರಾರಂಭದಲ್ಲಿ ಮನುಷ್ಯ ಹೀಗೆ ಇತರ ಎಲ್ಲಾ ಪ್ರಾಣಿಗಳಂತೆ ಜೀವಿಸುತ್ತಿದ್ದನು. ಅಂದರೆ ಹೆಚ್ಚು ದೈಹಿಕ ಶ್ರಮ, ಕಡಿಮೆ ಮಾನಸಿಕ ಒತ್ತಡ, ಹಸಿವಾದಾಗ ತಿನ್ನುವುದು, ನಿದ್ದೆ ಬಂದಾಗ ನಿದ್ದೆ ಮಾಡುವುದು, ಅಗತ್ಯಕ್ಕೆ ಅನುಗುಣವಾಗಿ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳುವುದು, ಎಲ್ಲಿಂದ ಎಲ್ಲಿಗೋ ಪಯಣ, ನಾಳೆಯ ಚಿಂತೆ ಇಲ್ಲ, ಹಿಂದಿನ ನೆನಪುಗಳಿಲ್ಲ, ಇಂದಿನ ಬದುಕಷ್ಟೇ ಮುಖ್ಯ ಎಂಬ ಸನ್ನಿವೇಶದಲ್ಲಿ ಯೋಗ ಧ್ಯಾನಗಳ ಅವಶ್ಯಕತೆ ಅಷ್ಟಾಗಿ ಇರಲಿಲ್ಲ….. ಆದರೆ ಸಮಾಜ ಮುಂದುವರಿದಷ್ಟು ಮನುಷ್ಯನ ಅಗತ್ಯಗಳು ಹೆಚ್ಚಾಗಿ, ಕುಟುಂಬ ವ್ಯವಸ್ಥೆ ಸಂಕೀರ್ಣವಾದಷ್ಟು ಮನುಷ್ಯನ ದೇಹ ಮತ್ತು ಮನಸ್ಸಿನ…

ಮುಂದೆ ಓದಿ..
ಸುದ್ದಿ 

ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ: ಪಳನಿಸ್ವಾಮಿ ವಿರುದ್ಧ ಕಾನೂನು ಕ್ರಮ

Taluknewsmedia.com

Taluknewsmedia.com ನಾಗಮಂಗಲ, ಜೂನ್ 19, 2025 : ನಾಗಮಂಗಲ ಪಟ್ಟಣದ ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ನೀಡಿದ ಪ್ರಕರಣವೊಂದರಲ್ಲಿ ಪಳನಿಸ್ವಾಮಿ ಎಂಬಾತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ದಿನಾಂಕ 19-06-2025 ರಂದು ಸಂಜೆ 4 ಗಂಟೆ ಸುಮಾರಿಗೆ ಕೆ. ಮಲೆನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ತೊಡಗಿದ್ದ ಪೊಲೀಸರು ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದರು. ಮಾಹಿತಿ ಪ್ರಕಾರ, ಪಳನಿಸ್ವಾಮಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದನು.ಸ್ಥಳಕ್ಕೆ ತೆರಳಿದ ಪೊಲೀಸರು ಹಾಗೂ ಪಂಚರ ತಂಡದವರ ಮುಡಿಯಲ್ಲಿ, ಇಬ್ಬರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದನ್ನು ಕಂಡುಬಂದಿದ್ದು, ಪೊಲೀಸರು ಸ್ಥಳಕ್ಕೆ ಕೂಡಲೇ ಅವರಿಬ್ಬರು ಪರಾರಿಯಾಗಿದ್ದಾರೆ. ಅಂಗಡಿಯೊಳಗಿದ್ದ ಪಳನಿಸ್ವಾಮಿಗೆ ವಿಚಾರಣೆ ನಡೆಸಿದಾಗ, ಆತ ಅಂಗಡಿಯ ವ್ಯವಹಾರಕ್ಕಾಗಿ ಈ ರೀತಿಯ ಅವಕಾಶ ನೀಡುತ್ತಿದ್ದೇನೆ ಎಂದು ಒಪ್ಪಿಕೊಂಡನು.ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ರಾಜ…

ಮುಂದೆ ಓದಿ..
ಸುದ್ದಿ 

ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲು.

Taluknewsmedia.com

Taluknewsmedia.comಬೆಂಗಳೂರು, ಜೂನ್ 21 – ನಗರದ ನಿವಾಸಿಯಾದ ಆಯೇಶ್ ಪರ್ವೀಸ್ ತಮ್ಮ ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನವಾದ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಘಟನೆಯು ದಿನಾಂಕ 16 ಜೂನ್ 2025 ರಂದು ರಾತ್ರಿ ಸಂಭವಿಸಿದೆ. ಆಯೇಶ್ ಪರ್ವೀಸ್ ತಮ್ಮ ಹೊಂಡಾ ಡಿಯೋ ದ್ವಿಚಕ್ರ ವಾಹನ (ನಂ: KA-51-EQ-4720) ಅನ್ನು ತಮ್ಮ ನಿವಾಸದ ಸಮೀಪ ಪಾರ್ಕ್ ಮಾಡಿಕೊಂಡಿದ್ದರು. ಇದರಲ್ಲಿ ಚಾಸಿಸ್ ಸಂಖ್ಯೆ: ME4JF393JF7081636 ಮತ್ತು ಎಂಜಿನ್ ಸಂಖ್ಯೆ: JF39E71081834 ಆಗಿದೆ. ಅವರು ಕೊನೆಯದಾಗಿ ವಾಹನವನ್ನು ದಿನಾಂಕ 16/06/2025 ರಂದು ರಾತ್ರಿ 10:30 ಗಂಟೆಗೆ ನೋಡಿದ್ದು, ನಂತರದ ದಿನದಂದು, 17/06/2025 ರಂದು ಬೆಳಿಗ್ಗೆ 6:00 ಗಂಟೆಗೆ ವಾಹನ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ.ಸುಮಾರು ₹65,000 ಮೌಲ್ಯದ ಈ ವಾಹನವನ್ನು ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆ, ಅವರು ಮೈಕೋ ಬಡಾವಣೆಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿಕೊಂಡ ಪೊಲೀಸರು ಪ್ರಕರಣ…

ಮುಂದೆ ಓದಿ..
ಸುದ್ದಿ 

ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್ ಪಾರ್ಕಿಂಗ್‌ನಿಂದ ದ್ವಿಚಕ್ರ ವಾಹನ ಕಳ್ಳತನ.

Taluknewsmedia.com

Taluknewsmedia.comಬೆಂಗಳೂರು, ಜೂನ್ 21 2025:ನಗರದ ದೊಡ್ಡತೋಗೂರಿನಲ್ಲಿ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನ ಕಳ್ಳತನವಾದ ಘಟನೆ ನಡೆದಿದ್ದು, ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರುಲ್ ಆನಂದನ್ ಅವರು ದೊಡ್ಡತೋಗೂರಿನ ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ತಮ್ಮ ಸುಜಿಕಿ ಆಕ್ಸಿಸ್ 125 (ವಾಹನ ಸಂಖ್ಯೆ KA-05-LQ-4304) ದ್ವಿಚಕ್ರ ವಾಹನವನ್ನು ದಿನಾಂಕ 27-05-2025ರಂದು ರಾತ್ರಿ 8:45 ಗಂಟೆಗೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು.ಪರಿವಾರಿಕ ಕಾರಣಗಳಿಂದ ಊರಿಗೆ ತೆರಳಿದ್ದ ದೂರುದಾರರು 10-06-2025ರಂದು ಬೆಳಿಗ್ಗೆ 7:30 ಗಂಟೆಗೆ ವಾಪಸ್ ಬಂದು ನೋಡಿದಾಗ ತಮ್ಮ ವಾಹನವು ಪಾರ್ಕಿಂಗ್‌ನಲ್ಲಿ ಕಾಣಿಸದ ಹಿನ್ನೆಲೆ ತಡವಾಗಿ ಬಂದು ಪೊಲೀಸ್ ಠಾಣೆಗೆ ದೂರು ನೀಡಿದರು. ಯಾರೋ ಅಪರಿಚಿತ ವ್ಯಕ್ತಿಗಳು ಪಾರ್ಕಿಂಗ್‌ನಲ್ಲಿದ್ದ ವಾಹನವನ್ನು ಕಳ್ಳತನ ಮಾಡಿದ ಅನುಮಾನ ವ್ಯಕ್ತವಾಗಿದೆ.ಕಳ್ಳತನವಾದ ವಾಹನದ ವಿವರಗಳು:ವಾಹನದ ಬ್ರ್ಯಾಂಡ್: ಸುಜಿಕಿ ಆಕ್ಸಿಸ್ 125ಮಾದರಿ: 2022ಬಣ್ಣ: ಮ್ಯಾಟ್ ಬ್ಲ್ಯಾಕ್ವಾಹನ ಸಂಖ್ಯೆ: KA-05-LQ-4304ಎಂಜಿನ್ ನಂ.: AF217288981ಚೆಸ್ಸಿಸ್ ನಂ.:…

ಮುಂದೆ ಓದಿ..
ಸುದ್ದಿ 

ನಾಗಮಂಗಲದಲ್ಲಿ ಎರಡು ಕಾರುಗಳ ನಡುವೆ ಅಪಘಾತ : ತಪ್ಪಿದ ಪ್ರಾಣಾಪಾಯ

Taluknewsmedia.com

Taluknewsmedia.comನಾಗಮಂಗಲ-ಮಂಡ್ಯ ರಸ್ತೆ ವೆಂಕಟೇಶ್ವರ ಟಾಕೀಸ್ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ನಷ್ಟ ಸಂಭವಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.ಎನ್.ಜಿ. ನಾಗೇಗೌಡ (62), ನಾಗೇಗೌಡನಪಾಳ್ಯ ಗ್ರಾಮದ ರೈತರೊಬ್ಬರು, ತಮ್ಮ ಕುಟುಂಬ ಸಮೇತ ಇನ್ನೊವಾ ಕ್ರಿಸ್ತಾ ಕಾರಿನಲ್ಲಿ (KA-06 Z-4681) ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಊರಿಗೆ ವಾಪಸ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರನ್ನು ಅವರ ಮಗ ಗೋವಿಂದರಾಜು ಚಾಲನೆ ಮಾಡುತ್ತಿದ್ದರು.ವೆಂಕಟೇಶ್ವರ ಟಾಕೀಸ್ ಹತ್ತಿರ ಟಿಎನ್-04 ಎಜೆ-8928 ಸಂಖ್ಯೆದ ಮಾರುತಿ ರಿಡ್ಜ್ ಕಾರು ನಿರ್ಲಕ್ಷ್ಯದಿಂದ ಯು-ಟರ್ನ್ ತೆಗೆದುಕೊಂಡಾಗ ಇನ್ನೊವಾ ಕಾರಿಗೆ ಬಲಭಾಗದಲ್ಲಿ ಡಿಕ್ಕಿಯಾಗಿದೆ. ಡಿಕ್ಕಿಯಿಂದ ಇನ್ನೊವಾ ಕಾರಿನ ಎರಡೂ ಬಲಭಾಗದ ಬಾಗಿಲುಗಳು ಜಖಂಗೊಂಡಿದ್ದು, ಮಾರುತಿ ಕಾರಿನ ಮುಂಭಾಗದ ಬಂಪರ್ ಹಾಗೂ ಚಾಸಿಸು ಧ್ವಂಸವಾಗಿದೆ.ಘಟನೆಯ ನಂತರ ಎರಡೂ ವಾಹನದ ಚಾಲಕರು ವಾಹನಗಳನ್ನು ರಸ್ತೆಯ ಪಕ್ಕ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಸದ್ಯಕ್ಕೆ ಯಾವುದೇ ವ್ಯಕ್ತಿಗೆ…

ಮುಂದೆ ಓದಿ..
ಸುದ್ದಿ 

ಎಚ್‌.ಎಸ್‌.ಆರ್ ಲೇಔಟ್‌ನಲ್ಲಿ ಪಿಜಿ ಗೃಹದಲ್ಲಿ ದೊಡ್ಡ ಮಟ್ಟದ ಕಳ್ಳತನ – ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ಸಾಧನಗಳು ಮಾಯ.

Taluknewsmedia.com

Taluknewsmedia.comಬೆಂಗಳೂರು, ಮೇ 21: ನಗರದ ಹೆಚ್.ಎಸ್.ಆರ್ ಲೇಔಟ್‌ನ 7ನೇ ಸೆಕ್ಟರ್, 21ನೇ ಕ್ರಾಸ್‌ನಲ್ಲಿ ಇರುವ ಖಾಸಗಿ ಪಿಜಿ ನಿವಾಸದಲ್ಲಿ ಇಂದು ಬೆಳಗಿನ ಜಾವ ದುಷ್ಟರು ಎಂಟ್ರಿ ಕೊಟ್ಟು ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.ದೀಪಾಂಶು ಅವರು ತಮ್ಮ ಸ್ನೇಹಿತ ಸಾಮ್ರಾಟ್ ಜೊತೆ “ಜೋಲೋ ಇಂಕ್ಸ್” ಪಿಜಿಯಲ್ಲಿ ವಾಸವಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 18ರ ಬೆಳಗಿನ ಜಾವ 4:20ರ ವೇಳೆಗೆ ಅವರು ಮಲಗಿದ್ದಾಗ, ಪಿಜಿ ಬಾಗಿಲಿನ ಕೀ ಹೊರಗಡೆ ಬಿಟ್ಟಿದ್ದನ್ನ ನೋಡಿ ಯಾರೊ ಅಪರಿಚಿತ ವ್ಯಕ್ತಿ ಪಿಜಿಯೊಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ.ಕಳುವಾದ ವಸ್ತುಗಳ ವಿವರ:ಮ್ಯಾಕ್‌ಬುಕ್ ಎಯರ್ M2 – ರೂ. 50,000ಐಪ್ಯಾಡ್ ಪ್ರೋ – ರೂ. 30,000ಐಫೋನ್ 15 – ರೂ. 60,000ವಿವೋ 200E ಮೊಬೈಲ್ – ರೂ. 12,000ಮ್ಯಾಕ್‌ಬುಕ್ ಎಂ ಪ್ರೋ – ರೂ. 50,000ಲ್ಯಾಪ್‌ಟಾಪ್…

ಮುಂದೆ ಓದಿ..
ಅಂಕಣ 

ಲೋಕಾಯುಕ್ತ ಭ್ರಷ್ಟಾಚಾರ……

Taluknewsmedia.com

Taluknewsmedia.comತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ,ರಕ್ಷಕರೇ ಭಕ್ಷಕರಾದರೇ,ಕಾಯುವವರೇ ಕೊಲ್ಲುವವರಾದರೇ,ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ…….. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್ಯನ ದೇಹದ ನರ ನಾಡಿಗಳಲ್ಲೂ ಭ್ರಷ್ಟಾಚಾರದ ವಿಷ ತುಂಬಿಕೊಂಡಿರುವಂತಿದೆ. ಅಂದರೆ ಕೆಟ್ಟ, ಭ್ರಷ್ಟ ಹಣದ ಪ್ರಭಾವ ಇಡೀ ಸಮಾಜವನ್ನು ಆವರಿಸಿಕೊಂಡಿದೆ. ಹಣ ಹೇಗಾದರೂ ಇರಲಿ, ಹೇಗಾದರೂ ಬರಲಿ ಹಣದಿಂದ ಎಲ್ಲವನ್ನೂ ಪಡೆಯಬಹುದು ಎನ್ನುವ ಮನೋಭಾವನೆಯ ವಾತಾವರಣ ಎಲ್ಲರಲ್ಲೂ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಮಾತನಾಡುವುದು ಮೂರ್ಖತನವಾಗುತ್ತದೆ. ಬಹುತೇಕ ಪ್ರತಿಯೊಬ್ಬರು ಹಣದ ಹಿಂದೆಯೇ ಬಿದ್ದಿದ್ದಾರೆ. ಶಿಕ್ಷಣಕ್ಕೆ ಹಣ, ಆರೋಗ್ಯಕ್ಕೆ ಹಣ, ಊಟಕ್ಕೆ ಹಣ, ಪ್ರವಾಸಕ್ಕೆ ಹಣ, ಬಟ್ಟೆಗೆ ಹಣ, ವಸತಿಗೆ ಹಣ, ಮನೆಯ ಗೃಹೋಪಯೋಗಿ ವಸ್ತುಗಳಿಗೆ ಹಣ, ಸಂಪರ್ಕ ಸಾಧನಗಳಿಗೆ ಹಣ, ಮದುವೆಗೆ ಹಣ, ನಾಮಕರಣಕ್ಕೆ ಹಣ, ಹುಟ್ಟುಹಬ್ಬಕ್ಕೆ ಹಣ, ವಾರ್ಷಿಕೋತ್ಸವಕ್ಕೆ ಹಣ, ಜೀವ ವಿಮೆಗೆ ಹಣ, ವಿದ್ಯುತ್ ಬಿಲ್ಲಿಗೆ…

ಮುಂದೆ ಓದಿ..
ಸುದ್ದಿ 

6ನೇ ತರಗತಿ ವಿದ್ಯಾರ್ಥಿ ಕಾಣೆ – ಆದಿಚುಂಚನಗಿರಿ ವಿದ್ಯಾರ್ಥಿ ನಿಲಯದಿಂದ ಬಾಲಕ ಕಾಣೆ

Taluknewsmedia.com

Taluknewsmedia.com ನಾಗಮಂಗಲ ತಾಲೂಕಿನಲ್ಲಿ ಆದಿಚುಂಚನಗಿರಿ ಯಲ್ಲಿ ಶ್ರೀ ಗುರುಕುಲ ಮಾ. ಶಾಲೆಯ ವಿದ್ಯಾರ್ಥಿ ನಿಲಯದಿಂದ 12 ವರ್ಷದ ಬಾಲಕನೊಬ್ಬ ಕಾಣೆಯಾಗಿರುವ ದುಃಖದ ಘಟನೆ ನಡೆದಿದೆ.ಗಂಗಾಧರ ಬಿನ್ ಶೇಖಪ್ಪ (ವಯಸ್ಸು 25), ವಾರ್ಡನ್, ಶ್ರೀ ಗುರುಕುಲ ಮಾ. ಶಾಲೆ, ಆದಿಚುಂಚನಗಿರಿ, ಅವರು ನೀಡಿದ ದೂರಿನ ಪ್ರಕಾರ, ದೊಡ್ಡಬಳ್ಳಾಪುರದ ನಿವಾಸಿ ರೇವಂತ ಬಿನ್ ನರಸಿಂಹಮೂರ್ತಿ, 6ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕನು ವಿದ್ಯಾರ್ಥಿ ನಿಲಯದಿಂದ ಹೊರ ಹೋಗಿ ನಂತರ ಹಾಸ್ಟೆಲ್‌ಗೆ ಮರಳಿಲ್ಲ.ಬಾಲಕನ ಪೋಷಕರು ನಿನ್ನೆ ಬೆಳ್ಳೂರು ಕ್ರಾಸ್ ಹಾಗೂ ಅದರ ಸುತ್ತಮುತ್ತದ ಬಸ್ ನಿಲ್ದಾಣಗಳು ಸೇರಿದಂತೆ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಅವನು ಪತ್ತೆಯಾಗದ ಹಿನ್ನೆಲೆ ಇಂದು ಠಾಣೆಗೆ ದೂರು ನೀಡಲಾಗಿದೆ.ಕಾಣೆಯಾದ ಬಾಲಕನ ವೈಶಿಷ್ಟ್ಯಗಳು ಈ ಕೆಳಕಂಡಂತಿವೆ:ಮುಖಾಕೃತಿಯು: ದುಂಡು ಮುಖಚರ್ಮದ ಬಣ್ಣ: ಗೋಧಿ ಮೈಬಣ್ಣವಸ್ತ್ರಧರಣೆ: ಬಿಳಿ ತುಂಬುತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್, ಕೆಂಪು ಉದ್ದಗೆರೆಎತ್ತರ: ಸುಮಾರು 4 ಅಡಿ 3…

ಮುಂದೆ ಓದಿ..
ಸುದ್ದಿ 

ಹಟ್ನ ಗ್ರಾಮದಲ್ಲಿ ಅಕ್ರಮ ಮದ್ಯ ವಿತರಣೆ : ಆರೋಪಿತನಿಂದ ಮದ್ಯ ಹಾಗೂ ಲೋಟ ವಶ

Taluknewsmedia.com

Taluknewsmedia.com ಹಟ್ನ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಬೆಳ್ಳೂರು ಠಾಣೆಯ ಪೊಲೀಸರು ದಾಳಿ ನಡೆಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ದಿನಾಂಕ 19/06/2025 ರಂದು ಸಂಜೆ 04:30 ಗಂಟೆಗೆ ಈ ದಾಳಿ ನಡೆಯಿತು.ಪಿಎಸ್‌ಐ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಕಾಶ್ (CP-679), ಕಾಂತ (CP-254), ರಮೇಶ್ (CP-490) ಹಾಗೂ ಇಬ್ಬರು ಪಂಚಾಯತ್ ಸದಸ್ಯರು ಪಾಲ್ಗೊಂಡರು. ದಾಳಿ ವೇಳೆ ಹಟ್ನ ಗೇಟ್ ಬಳಿಯ ಕ್ಯಾಂಡಿಮೆಂಟ್ಸ್ ಅಂಗಡಿಯಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಲೋಟಗಳಲ್ಲಿ ಮದ್ಯ ನೀಡುತ್ತಿದ್ದ ದೇವರಾಜು ಬಿನ್ ಬಸವೇಗೌಡ (35),ಹಟ್ನ ಗ್ರಾಮಸ್ಥನನ್ನು ಬಂಧಿಸಲಾಯಿತು.ಆತನಿಂದ 180 ಎಂ.ಎಲ್. Old Admiral Brandy ಯ 4 ಟೆಟ್ರಾ ಪ್ಯಾಕ್‌ಗಳು ಹಾಗೂ 3 ಪ್ಲಾಸ್ಟಿಕ್ ಲೋಟಗಳು ವಶಪಡಿಸಿಕೊಳ್ಳಲಾಗಿದೆ. ಪ್ಯಾಕ್‌ಗಳ ಒಟ್ಟು ಮೌಲ್ಯ ₹540 ರೂ. ಆಗಿದೆ. ದೇವರಾಜು ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯ…

ಮುಂದೆ ಓದಿ..
ಅಂಕಣ 

ಹುಚ್ಚು ಯೋಚನೆ ಮತ್ತು ಯೋಜನೆ…….

Taluknewsmedia.com

Taluknewsmedia.comಕಾವೇರಿ ಆರತಿ ಮತ್ತು ಕೆಆರ್‌ಎಸ್ ಜಲಾಶಯದ ಬಳಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸರ್ಕಾರದ ತೀರ್ಮಾನ……….. ಯಾಕ್ರೀ ಸ್ವಾಮಿ, ನದಿಯನ್ನು ಇಟ್ಕೊಂಡು ರಾಜಕೀಯನೋ, ದುಡ್ಡು ಮಾಡಲಿಕ್ಕೋ, ಪ್ರಚಾರ ಪಡೆಯಲಿಕ್ಕೋ ಪ್ರಯತ್ನ ಪಡ್ತೀರಿ. ಅದೊಂದು ಜೀವ ಜಲ. ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ……ಕೃಷಿಗಾಗಿಯೋ, ಕುಡಿಯುವ ನೀರಿಗಾಗಿಯೋ ಎಷ್ಟು ಸಾಧ್ಯವೋ ಅಷ್ಟು ಅದನ್ನ ಸಹಜ ರೀತಿಯಲ್ಲೇ ಉಪಯೋಗಿಸಿಕೊಳ್ಳಿ ಅಷ್ಟೇ. ಅದು ನದಿಗೆ ನೀವು ಕೊಡಬಹುದಾದ ಬಹುದೊಡ್ಡ ಕೊಡುಗೆ. ಅದು ಬಿಟ್ಟು ಅನಾವಶ್ಯಕವಾಗಿ ಕಾವೇರಿ ಆರತಿ ಎನ್ನುವ ಕಾರ್ಯಕ್ರಮ ಮಾಡಿ ಆ ನದಿಯನ್ನು ಕಲ್ಮಶ ಮಾಡುವುದಲ್ಲದೆ, ಮೌಢ್ಯವನ್ನು ಬಿತ್ತುತ್ತಿದ್ದೀರಿ………. ಗಂಗಾರತಿ ಎಂಬ ಕಾರ್ಯಕ್ರಮ ಇದೇ ರೀತಿಯ ಮೌಢ್ಯ. ಇದು ಅದರ ನಕಲು. ಜನರನ್ನು ಭಾವನಾತ್ಮಕವಾಗಿ ಸೆಳೆಯುವ ರಾಜಕೀಯ ಕುತಂತ್ರ. ಜನರಲ್ಲಿ ಗುಲಾಮಿ ಮನಸ್ಥಿತಿ ಬೆಳೆಸುವ ಹುನ್ನಾರ……… ನದಿ ನೀರಿಗೆ ಒಂದಷ್ಟು ಗೌರವ, ಒಂದಷ್ಟು ಪ್ರೀತಿ ಕೊಡಬೇಕೆಂಬುದು ನಿಜ, ಅದು ಸಹಜವಾಗಿಯೇ…

ಮುಂದೆ ಓದಿ..