ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಅತ್ತಿಗೆ ಮೇಲೆ ಮೈದುನ ದಾಳಿ — ಜೀವ ಅಪಾಯದಿಂದ ಪಾರಾದ ಮಹಿಳೆ
Taluknewsmedia.comಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಅತ್ತಿಗೆ ಮೇಲೆ ಮೈದುನ ದಾಳಿ — ಜೀವ ಅಪಾಯದಿಂದ ಪಾರಾದ ಮಹಿಳೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಒಂದು ಕುಟುಂಬದೊಳಗಿನ ಭೀಕರ ಹಲ್ಲೆಯಿಂದ ಆತಂಕ ಮೂಡಿಸಿದೆ. ಮಾಹಿತಿಯ ಪ್ರಕಾರ, 17 ಗುಂಟೆ ಜಮೀನು ವಿವಾದದ ಹಿನ್ನೆಲೆಯಲ್ಲಿ ಅಣ್ಣ ಇಲ್ಲದ ಸಮಯವನ್ನು ಪ್ರಯೋಜನ ಮಾಡಿಕೊಂಡು ಮೈದುನ ಮುನಿಕೃಷ್ಣ ಹಾಗೂ ಮಂಜಮ್ಮ ಎಂಬುವರು ಅತ್ತಿಗೆ ಲಕ್ಷ್ಮಿದೇವಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೈದುನನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ನಡು ರಸ್ತೆಯಲ್ಲೇ ದಾಳಿ ನಡೆಸಿದ್ದು, ಬಳಿಕ ಬಾವಿಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂಬ ಆಘಾತಕಾರಿ ಆರೋಪ ಹೊರಹೊಮ್ಮಿದೆ. ಘಟನೆಯ ಸಂಪೂರ್ಣ ದೃಶ್ಯ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯಲ್ಪಟ್ಟಿದೆ, ಇದರಿಂದ ಪ್ರಕರಣ ಇನ್ನಷ್ಟು ಗಂಭೀರ ತಿರುವು ಪಡೆದಿದೆ. ಗಾಯಗೊಂಡ ಲಕ್ಷ್ಮಿದೇವಮ್ಮ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.…
ಮುಂದೆ ಓದಿ..
