ಸುದ್ದಿ 

ದೇಶವನ್ನು ನಡುಗಿಸಿದ ₹150 ಕೋಟಿ ಸೈಬರ್ ವಂಚನೆ – ಎಚ್ಚರಿಕೆಯ ಘಂಟೆ!

Taluknewsmedia.com

Taluknewsmedia.comದೇಶವನ್ನು ನಡುಗಿಸಿದ ₹150 ಕೋಟಿ ಸೈಬರ್ ವಂಚನೆ – ಎಚ್ಚರಿಕೆಯ ಘಂಟೆ! ಹಾಸನದ ಬೇಲೂರಿನ 28 ವರ್ಷದ ಸಯ್ಯದ್ ಅರ್ಫಾತ್ ಬಂಧನ.. ದಾವಣಗೆರೆಯ ಪೊಲೀಸರು ಶ್ಲಾಘನೀಯ ಕಾರ್ಯಾಚರಣೆ – ಹಣ ಹಿಂತಿರುಗಿದ ಮೊದಲ ಪ್ರಕರಣ! ದಾವಣಗೆರೆ: ಆನ್‌ಲೈನ್ ವಂಚನೆಗಳಿಂದ ಜನರ ಬದುಕು ತತ್ತರಿಸುತ್ತಿರುವ ಕಾಲದಲ್ಲಿ, ದಾವಣಗೆರೆಯ ಸೈಬರ್ ಪೊಲೀಸ್ ಠಾಣೆ ಎಚ್ಚರಿಕೆಯ ಗಂಟೆ ಬಾರಿಸಿರುವಂತೆ ದೊಡ್ಡ ಸೈಬರ್ ಅಪರಾಧ ಜಾಲವನ್ನು ಭೇದಿಸಿದೆ. ಹಾಸನದ ಬೇಲೂರಿನ 28 ವರ್ಷದ ಸಯ್ಯದ್ ಅರ್ಫಾತ್ ಬಂಧನದೊಂದಿಗೆ ₹150 ಕೋಟಿ ರೂಪಾಯಿ ಸೈಬರ್ ದೋಚಾಟದ ಗೂಢಚರ್ಯೆ ಬಯಲಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಗಾಜಿಯಾಬಾದ್, ಶ್ರೀನಗರ, ಏಲೂರು, ಮುಂಬೈ, ಬೆಂಗಳೂರು ಸೇರಿದಂತೆ ಹಲವೆಡೆ ವಂಚನೆ ನಡೆಸುತ್ತಿದ್ದ ಈ ಗ್ಯಾಂಗ್, ಕೇವಲ 25 ದಿನಗಳಲ್ಲಿ ₹150 ಕೋಟಿಯನ್ನು ಬ್ಯಾಂಕ್ ಖಾತೆಗಳಲ್ಲಿ ಹಾಕಿಸಿಕೊಂಡು ₹132 ಕೋಟಿಯನ್ನು ಎತ್ತಿಕೊಂಡಿದೆ! ಈ ಹಣ ಯಾರ ಕೈ ಸೇರಿದೆ ಎಂಬ ಪ್ರಶ್ನೆ…

ಮುಂದೆ ಓದಿ..
ಸುದ್ದಿ 

ಜೆಡಿಎಸ್ ಪಕ್ಷದ ಸಭೆ : ಗ್ರೇಟರ್ ಬೆಂಗಳೂರು ಅಥಾರಿಟಿ ವಾರ್ಡ್ ವಿಭಜನೆಗೆ ಆಕ್ಷೇಪಣೆ ಸಲ್ಲಿಕೆ ಮತ್ತು ಆಕಾಂಕ್ಷಿಗಳ ಪಟ್ಟಿ ಸಿದ್ಧತೆ.

Taluknewsmedia.com

Taluknewsmedia.comಜೆಡಿಎಸ್ ಪಕ್ಷದ ಸಭೆ : ಗ್ರೇಟರ್ ಬೆಂಗಳೂರು ಅಥಾರಿಟಿ ವಾರ್ಡ್ ವಿಭಜನೆಗೆ ಆಕ್ಷೇಪಣೆ ಸಲ್ಲಿಕೆ ಮತ್ತು ಆಕಾಂಕ್ಷಿಗಳ ಪಟ್ಟಿ ಸಿದ್ಧತೆ. ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವಾರ್ಡ್‌ಗಳ ವಿಭಜನೆಯಲ್ಲಿನ ನ್ಯೂನತೆಗಳ ಕುರಿತು ಆಕ್ಷೇಪಣೆ ಸಲ್ಲಿಸುವ ವಿಷಯ ಹಾಗೂ ಮುಂಬರುವ ಜಿಬಿಎ ಚುನಾವಣೆಗೆ ಜೆಡಿಎಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿ ಸಿದ್ಧತೆ ಕುರಿತಂತೆ ಇಂದು ಜೆಪಿ ಭವನದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯನ್ನು ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಶ್ರೀ ಎಚ್. ಎಂ. ರಮೇಶ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ನಗರ ಮುಖಂಡರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಪ್ರಮುಖ ಮುಖಂಡರು ಭಾಗವಹಿಸಿದರು. ಸಭೆಯಲ್ಲಿ 50 ಮಂದಿ ಆಕಾಂಕ್ಷಿಗಳ ಪ್ರಾಥಮಿಕ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನು ಪಕ್ಷದ ವರಿಷ್ಠ…

ಮುಂದೆ ಓದಿ..
ಅಂಕಣ 

ಬಸವ ಸಂಸ್ಕೃತಿ ಅಭಿಯಾನ……..

Taluknewsmedia.com

Taluknewsmedia.comಬಸವ ಸಂಸ್ಕೃತಿ ಅಭಿಯಾನ…….. ಮತ್ತೆ ಸಂಘಟನಾತ್ಮಕ ಚಟುವಟಿಕೆಯಲ್ಲಿ ಗರಿಗೆದರಿದ ಲಿಂಗಾಯತ ಧರ್ಮ ಸುದ್ದಿಯಲ್ಲಿ…… ತುಂಬಾ ಹಳೆಯ ಬೇಡಿಕೆಯಾದರೂ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಹೆಚ್ಚು ಪ್ರಚಾರ ಪಡೆದ ಲಿಂಗಾಯತ ಧರ್ಮದ ಹೋರಾಟ ಮತ್ತೊಮ್ಮೆ ಬಿರುಸು ಪಡೆದಿದೆ. ವಾಸ್ತವವಾಗಿ ಅದು ಲಿಂಗಾಯತ ಧರ್ಮವಲ್ಲ ಮಾನವ ಧರ್ಮ ಮತ್ತು ಇನ್ನೂ ಮುಂದೆ ಸಾಗಿ ಜೀವಪರ ನಿಲುವಿನ ಪ್ರಾಕೃತಿಕ ಧರ್ಮ…. ಜಗತ್ತಿನಲ್ಲಿ ಜೀಸಸ್ ಕ್ರೈಸ್ಟ್ ಅವರನ್ನು ಸಮಾನತೆಯ ವಿಷಯದಲ್ಲಿ ಮೇಲ್ಮಟ್ಟದಲ್ಲಿ ನೋಡಲಾಗುತ್ತದೆ.” ಶತ್ರುಗಳನ್ನು ಪ್ರೀತಿಸಿ – ನೆರೆಹೊರೆಯವರನ್ನು ಪ್ರೀತಿಸಿ ” ಎಂದು ಹೇಳುವ ಮೂಲಕ ಪ್ರೀತಿಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತಾರೆ. ಆದರೆ ‌ವಚನ ಸಂಸ್ಕೃತಿ ಒಂದು ಹಂತದಲ್ಲಿ ಅದನ್ನು ಮೀರಿ ಸಮಾನತೆಯನ್ನು ಪ್ರತಿಪಾದಿಸುತ್ತದೆ ” ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು “ 12 ನೆಯ ಶತಮಾನದ ಆ ಕರ್ಮಠ ಕಾಲದಲ್ಲಿಯೇ ಅಸ್ಪೃಶ್ಯರಿಗು ಬ್ರಾಹ್ಮಣರಿಗು ಮದುವೆ ಸಂಬಂಧ ಏರ್ಪಡಿಸುವುದು, ಈಗಿನ ಸಮಾಜದಲ್ಲೇ ವೇಶ್ಯಯರನ್ನು ನಿಕೃಷ್ಟವಾಗಿ…

ಮುಂದೆ ಓದಿ..
ಸುದ್ದಿ 

ಮಂಡ್ಯ : ಮಳೆಗೆ ಮಂಡ್ಯ ಜನ ಕಂಗೆಟ್ಟು – ಸಚಿವರ ಭೇಟಿ, ಪರಿಹಾರ ಭರವಸೆ ಮಾತ್ರ!

Taluknewsmedia.com

Taluknewsmedia.comಮಂಡ್ಯ : ಮಳೆಗೆ ಮಂಡ್ಯ ಜನ ಕಂಗೆಟ್ಟು – ಸಚಿವರ ಭೇಟಿ, ಪರಿಹಾರ ಭರವಸೆ ಮಾತ್ರ! ಸಕ್ಕರೆನಾಡು ಮಂಡ್ಯ ಜಿಲ್ಲೆ ಮತ್ತೆ ವರುಣನ ಕೋಪಕ್ಕೆ ತತ್ತರಿಸಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶಗಳ ಮನೆಗಳು ಜಲಾವೃತಗೊಂಡು ಜನರು ನರಳುತ್ತಿದ್ದಾರೆ. ರೈತರ ದುಡಿಮೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ದೊಡ್ಡ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಲಾವೃತಗೊಂಡ ಮಂಡ್ಯದ ಕೆರೆ ಅಂಗಳದಲ್ಲಿರುವ ಕೆ.ಹೆಚ್.ಬಿ. ಬಡಾವಣೆಗೆ ಸಚಿವ ಎನ್. ಚಲುವರಾಯಸ್ವಾಮಿ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದರು. ಅವರೊಂದಿಗೆ ಶಾಸಕ ಗಣಿಗ ಪಿ. ರವಿಕುಮಾರ್, ಡಿಸಿ, ಎಸ್ಪಿ, ಸಿಇಓ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಸಚಿವರು ಮಾತನಾಡುತ್ತಾ, “ಮಂಡ್ಯದಲ್ಲೂ ಶ್ರೀರಂಗಪಟ್ಟಣ, ದಸರಗುಪ್ಪೆ ಸೇರಿದಂತೆ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಕೆ.ಹೆಚ್.ಬಿ ಕಾಲೋನಿಗೂ ನೀರು ನುಗ್ಗಿದ್ದು, ತಡೆಗೋಡೆ ನಿರ್ಮಿಸಲು 41 ಕೋಟಿ ರೂ. ಟೆಂಡರ್ ಕರೆಯಲಾಗಿದೆ,” ಎಂದರು.…

ಮುಂದೆ ಓದಿ..
ಸುದ್ದಿ 

ಸರ್ಕಾರದಿಂದ ಆಂಬುಲೆನ್ಸ್ ಸೇವೆ ಸಿಬ್ಬಂದಿ ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ.

Taluknewsmedia.com

Taluknewsmedia.comಸರ್ಕಾರದಿಂದ ಆಂಬುಲೆನ್ಸ್ ಸೇವೆ ಸಿಬ್ಬಂದಿ ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ. ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕವಾಗುತ್ತಿಲ್ಲ ಹೊರಗುತ್ತಿಗೆ ಹಾಗೂ ಗುತ್ತಿಗೆಯ ಆಧಾರದ ಮೇಲೆ ನಡೆಯುವಂತಹ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಹೀಗೆ ಸಾವಿರಾರು ವಿಚಾರಗಳು ಮತ್ತೆ ಅವುಗಳ ಗೊಂದಲಗಳಲ್ಲಿ ಇರುವವರಿಗೆ ಸರಕಾರ ಕೊಂಚ ರಿಲೀಫ್ ಕೊಟ್ಟಿದೆ . ರಾಜ್ಯದಲ್ಲಿ ಇದು ಮೊದಲ ಬಾರಿಗೆ ಅಂತ ಹೇಳಬಹುದು 108 ಅಂದ್ರೆ ಆಂಬುಲೆನ್ಸ್ ಸೇವೆ ಮುಖ್ಯವಾಗಿ ಜನರಿಗೆ ತುಂಬಾ ಆರೋಗ್ಯದ ವಿಚಾರದಲ್ಲಿ ಹತ್ತಿರವಾಗಿ ಇರುವಂತದ್ದು. ಈ ಒಂದು ಸೇವೆಯಲ್ಲಿ ಗುತ್ತಿಗೆ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಎಂದು ಆರೋಗ್ಯ ಇಲಾಖೆ ತಿಳಿಸಿ ಮಂಜೂರು ಕೂಡ ಆಗಿದೆ. ಹಾಗೆ 104 ಸಹಾಯವಾಣಿ ಯೋಜನೆಯನ್ನು ಕೂಡ ಆರೋಗ್ಯ ವತಿಯಿಂದಲೇ ಜಾರಿಗೊಳಿಸಲಾಗುತ್ತದೆ . ಈ ಎರಡು ವಿಭಾಗಕ್ಕೆ ಸಂಬಂಧಪಟ್ಟಹಾಗೆ 3691 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಕ್ಕೆ ಸರ್ಕಾರ ಒಪ್ಪಿಗೆಯನ್ನು ಹಾಗೂ ಮಂಜೂರಾತಿಯನ್ನು ನೀಡಿದೆ. ನರ್ಸಿಂಗ್ ಯಾರ್ ಮಾಡಿದರೂ ಖುಷಿ ಪಡುವಂತ…

ಮುಂದೆ ಓದಿ..
ಸುದ್ದಿ 

2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊಗೆ ಗೌರವ

Taluknewsmedia.com

Taluknewsmedia.com2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊಗೆ ಗೌರವ 2025ನೇ ಸಾಲಿನ ಬಹುನಿರೀಕ್ಷಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಮಹಿಳಾ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ ಪ್ರದಾನ ಮಾಡಲಾಗಿದೆ. ಈ ಬಾರಿ ಒಟ್ಟು 338 ಮಂದಿ ಮತ್ತು ಸಂಸ್ಥೆಗಳು ನಾಮನಿರ್ದೇಶಿತರಾಗಿದ್ದರು. ಮಚಾಡೊ ಅವರು ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಉಳಿಸಲು ಹಾಗೂ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದತ್ತ ಶಾಂತಿಯುತ ಬದಲಾವಣೆಗಾಗಿ ನಡೆಸಿದ ಹೋರಾಟಕ್ಕೆ ಈ ಗೌರವ ದೊರೆತಿದೆ. ಪ್ರಶಸ್ತಿಯ ಮೊತ್ತ ಸುಮಾರು ₹10.38 ಕೋಟಿ ಆಗಿದೆ. ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಕುರಿತು ಪ್ರಕಟಣೆ ನೀಡಿದ್ದು, “ಮಚಾಡೊ ಅವರು ಒಮ್ಮೆಗೆ ತೀವ್ರವಾಗಿ ವಿಭಜನೆಯಾಗಿದ್ದ ವಿರೋಧ ಪಕ್ಷಗಳಲ್ಲಿ ಸಾಮರಸ್ಯ ನಿರ್ಮಿಸಿ, ದೇಶದಲ್ಲಿ ಸ್ವತಂತ್ರ ಚುನಾವಣೆ ಮತ್ತು ಪ್ರಾತಿನಿಧಿಕ ಆಡಳಿತದ ಅಗತ್ಯತೆಯನ್ನು ಒತ್ತಿ ಹೇಳಿದರು. ಅವರ ಈ ನಿರಂತರ ಪ್ರಯತ್ನಗಳು ಪ್ರಜಾಪ್ರಭುತ್ವದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟಿವೆ” ಎಂದು…

ಮುಂದೆ ಓದಿ..
ಸುದ್ದಿ 

“ಬೆಂಗಳೂರು ನಡಿಗೆ” ಆರಂಭ – ಪ್ರಚಾರ ನಡಿಗೆಯಾ? ಸಮಸ್ಯೆ ಪರಿಹಾರದ ನಡಿಗೆಯಾ?

Taluknewsmedia.com

Taluknewsmedia.com“ಬೆಂಗಳೂರು ನಡಿಗೆ” ಆರಂಭ – ಪ್ರಚಾರ ನಡಿಗೆಯಾ? ಸಮಸ್ಯೆ ಪರಿಹಾರದ ನಡಿಗೆಯಾ? ನಗರದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಿಗ್ಗೆ ಲಾಲ್ ಬಾಗ್ ಪೂರ್ವ ದ್ವಾರದಲ್ಲಿ “ಬೆಂಗಳೂರು ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆದರೆ ನಾಗರಿಕರ ಪ್ರಶ್ನೆ — ನಡಿಗೆಗಳಿಂದ ಸಮಸ್ಯೆ ಪರಿಹಾರವಾಗುವುದೇ? ನಗರದ ಪ್ರತಿಯೊಂದು ವಾರ್ಡ್‌ನಲ್ಲಿ ಮೂಲಸೌಕರ್ಯ ಹದಗೆಟ್ಟಿದೆ, ಗುಂಡಿಗಳು, ಒಳಚರಂಡಿ ತೊಂದರೆ, ಕಸದ ಸಮಸ್ಯೆ, ಟ್ರಾಫಿಕ್ ಅಸ್ತವ್ಯಸ್ತತೆ — ಇವುಗಳ ನಡುವೆ ನಡೆಯುವ ಈ ನಡಿಗೆ, ಜನಸಾಮಾನ್ಯರ ಕಷ್ಟದ “ನಿರೀಕ್ಷಾ ನಡಿಗೆ” ಆಗಿ ತೋರುತ್ತಿದೆ. ಡಿ.ಕೆ. ಶಿವಕುಮಾರ್ ಅವರು ನಾಗರಿಕರ ಅಹವಾಲುಗಳನ್ನು ಖುದ್ದಾಗಿ ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದರೂ, ಹಿಂದಿನ ಇಂತಹ ಕಾರ್ಯಕ್ರಮಗಳಲ್ಲಿ ನೀಡಿದ ಭರವಸೆಗಳು ಎಷ್ಟು ನೆಲೆಯಾದವು ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ನಗರಾಭಿವೃದ್ಧಿ…

ಮುಂದೆ ಓದಿ..
ಅಂಕಣ 

ಕುರ್ಚಿಗಾಗಿ ಕಿತ್ತಾಟ…….

Taluknewsmedia.com

Taluknewsmedia.comಕುರ್ಚಿಗಾಗಿ ಕಿತ್ತಾಟ……. ಸಂಪುಟ ವಿಸ್ತರಣೆ ಮತ್ತು ಖಾತೆಗಳು ಎಂಬ ರೋಗ….. ಸಮಾಜದ ನಡೆ ದುರಂತದ ಕಡೆ……. ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ…….. ಮುಖ್ಯಮಂತ್ರಿಯಾದವರು ತಮ್ಮ ಆಡಳಿತದ ಬಹುತೇಕ ಸಮಯವನ್ನು ಇದರ ಬಗ್ಗೆ ಯೋಚಿಸುವುದರಲ್ಲಿ ಮತ್ತು ಶಾಸಕರನ್ನು ಸಮಾಧಾನ ಮಾಡಿ ಹಿಡಿದಿಟ್ಟುಕೊಳ್ಳುವಲ್ಲಿಯೇ ಕಳೆದು ಬಿಡುತ್ತಾರೆ. ಜನರ ಬಗ್ಗೆ ಚಿಂತಿಸಲು ಅವರ ಬಳಿ ತುಂಬಾ ಕಡಿಮೆ ಸಮಯವಿರುತ್ತದೆ. ನಿಮಗೆ ತಿಳಿದಿರಬಹುದು,ಸರ್ಕಾರದ ಬಳಿ 34 ಮಂತ್ರಿಗಳ ಸ್ಥಾನ ಮತ್ತು ಮುಖ್ಯವಾಗಿ ಸುಮಾರು ‌75 ಇಲಾಖೆಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಪಕ್ಷದ ಶಾಸಕರು ಅವರ ದೃಷ್ಟಿಯಲ್ಲಿ ಅತಿ ಮಹತ್ವದ ಇಲಾಖೆ ಎಂದು ಪರಿಗಣಿಸುವುದು ಯಾವುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗೃಹ…

ಮುಂದೆ ಓದಿ..
ಸುದ್ದಿ 

ವಿಷಕಾರಿ ಕೆಮ್ಮಿನ ಸಿರಪ್ ದುರಂತಕ್ಕೆ ಕೇಂದ್ರದ ಕಠಿಣ ಹೊಡೆತ

Taluknewsmedia.com

Taluknewsmedia.comವಿಷಕಾರಿ ಕೆಮ್ಮಿನ ಸಿರಪ್ ದುರಂತಕ್ಕೆ ಕೇಂದ್ರದ ಕಠಿಣ ಹೊಡೆತ ವಿಷಕಾರಿ ಕೆಮ್ಮಿನ ಸಿರಪ್ ಸೇವನೆಯಿಂದ 20ಕ್ಕೂ ಹೆಚ್ಚು ನಿರಪರಾಧ ಮಕ್ಕಳ ಪ್ರಾಣ ಬಲಿಯಾದ ಹಿನ್ನೆಲೆ, ಕೇಂದ್ರ ಸರ್ಕಾರವು ಔಷಧ ಕಂಪನಿಗಳ ವಿರುದ್ಧ ಇತಿಹಾಸದಲ್ಲೇ ಅತಿ ಕಠಿಣ ಕ್ರಮ ಕೈಗೊಂಡಿದೆ. 🔹 ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (CDSCO) ತನಿಖೆ ನಡೆಸಿ, ಮೂರೂ ಕಂಪನಿಗಳ ಉತ್ಪನ್ನಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದುದನ್ನು ದೃಢಪಡಿಸಿದೆ.🔹 ಪರಿಣಾಮವಾಗಿ ಸರ್ಕಾರವು ಕೆಳಗಿನ ಮೂರು ಸಿರಪ್‌ಗಳ ತಯಾರಿ ಹಾಗೂ ಮಾರಾಟವನ್ನು ನಿಷೇಧಿಸಿದೆ: 🧪 ಕೋಲ್ಡ್‌ರಿಫ್‌ (Coldriff) 🧪 ರೆಸ್ಪಿರ್‌ಫ್ರೆಶ್‌-ಟಿಆರ್‌ (Respirefresh-TR) 🧪 ರೀಲೈಫ್‌ (Relife) 🔹 ಈ ಸಿರಪ್‌ಗಳನ್ನು ತಕ್ಷಣ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಹಾಗೂ ಉತ್ಪಾದನೆ ನಿಲ್ಲಿಸುವಂತೆ ಕಂಪನಿಗಳಿಗೆ ಸರ್ಕಾರ ಆದೇಶಿಸಿದೆ.🔹 ಕೇಂದ್ರ ಸರ್ಕಾರವು ಈ ಬೆಳವಣಿಗೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಗೆ ಅಧಿಕೃತ ವರದಿ ಸಲ್ಲಿಸಿದೆ.🔹 ಜೊತೆಗೆ, ಈ ಸಿರಪ್‌ಗಳು ಬೇರೆ…

ಮುಂದೆ ಓದಿ..
ಸುದ್ದಿ 

ತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತನಿಗೆ ಮೈಸೂರು ಪೊಲೀಸರು ಗುಂಡೇಟು..

Taluknewsmedia.com

Taluknewsmedia.comತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತನಿಗೆ ಮೈಸೂರು ಪೊಲೀಸರು ಗುಂಡೇಟು ಮೈಸೂರು: ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಶಂಕಿತನ ಕಾರ್ತಿಕ್ ಅವರನ್ನು ಪೊಲೀಸರ ವಶಕ್ಕೆ ಪಡೆಯುವ ವೇಳೆ, ಆತ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ. ಪ್ರಕರಣದ ಸಂಬಂಧದಲ್ಲಿ ಕಾರ್ತಿಕ್ ಅವರನ್ನು ಸಿದ್ದಲಿಂಗಪುರಕ್ಕೆ ಕರೆದುಕೊಂಡು ಹೋಗಿ ಮರುಬರುವಾಗ, ಮೇಟಗಳ್ಳಿ ಪ್ರದೇಶದಲ್ಲಿ ಅಧಿಕಾರಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯ ಸ್ಥಳದಲ್ಲಿ ನಿಂತಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕಾರ್ತಿಕ್ ಅವರನ್ನು ಕೊಳ್ಳೇಗಾಲದಲ್ಲಿ ವಶಪಡಿಸಲಾಗಿತ್ತು. ಮೈಸೂರು ಪೊಲೀಸರು ವಿಚಾರಣೆ ನಡೆಸಿ ಅವನನ್ನು ಮನೆಗೆ ಕರೆದುಕೊಂಡು ಹೋಗಿದ್ದಾಗ, ಮರಳಿ ಬರುವ ಸಮಯದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರ್ತಿಕ್ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗಿದೆ. ಕಾರ್ತಿಕ್ ಬಲಗಾಲದ ತೊಡೆಗೆ ಗುಂಡು ಹಾರಲಾಗಿದ್ದು, ಅವನನ್ನು ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ವೇಳೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಅವರಿಗೆ ಕೂಡ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

ಮುಂದೆ ಓದಿ..