ಮರು ಜಾತಿ ಜನಗಣತಿಯ ಮೌಲ್ಯವೆಷ್ಟು……
ಮರು ಜಾತಿ ಜನಗಣತಿಯ ಮೌಲ್ಯವೆಷ್ಟು…… ಮಾನವ ಧರ್ಮ, ನಾಗರಿಕ ನಡವಳಿಕೆ, ಜೀವಪರ ನಿಲುವಿನ ಪ್ರಬುದ್ಧ ಮನಸುಗಳಿಗೆ ಅಸಹ್ಯ ಹುಟ್ಟಿಸುವಷ್ಟು ಜಾತಿ ಜನಗಣತಿಯ ಅನಿವಾರ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ಜಾತಿ ಮುಕ್ತ ಸಮ ಸಮಾಜದ ಕರ್ನಾಟಕ ಮತ್ತು ಭಾರತೀಯತೆಯ ಬಗ್ಗೆ ಕನಸು ಕಾಣುತ್ತಾ……… ಜಾತಿ ಆಧಾರಿತ ಮರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಸಮಾಜದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ರೀತಿಯ ಆತಂಕ, ಉದ್ವೇಗ, ಕುತೂಹಲ, ಅಸಹನೆ, ತಲ್ಲಣಗಳನ್ನು ಸೃಷ್ಟಿಸಿದೆ. ಮುಖ್ಯವಾಗಿ ಒಂದಷ್ಟು ಜಾತಿಗಳ ಜನನಾಯಕರಿಗೆ, ರಾಜಕೀಯ ಹಿತಾಸಕ್ತಿ ಹೊಂದಿರುವವರಿಗೆ ಇದೊಂದು ಬಹುದೊಡ್ಡ ಸವಾಲನ್ನು ಒಡ್ಡಿದೆ ಎಂಬ ರೀತಿಯ ಕ್ರಿಯೆ ಪ್ರತಿಕ್ರಿಯೆಗಳು ಮೂಡಿಬರುತ್ತಿವೆ. ಸಾಮಾಜಿಕ ನ್ಯಾಯಕ್ಕಾಗಿ ಆರ್ಥಿಕ ಮತ್ತು ಶೈಕ್ಷಣಿಕ ಸಮತೋಲನಕ್ಕಾಗಿ ಈ ಮರು ಜಾತಿ ಗಣತಿಯನ್ನು ಮಾಡಲಾಗುತ್ತಿದೆ ಎಂಬುದು ಮುಖ್ಯಮಂತ್ರಿಗಳ ವಿವರಣೆ. ಹಿಂದೆ ನಡೆದ ಕಾಂತರಾಜು ವರದಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದವು, ಅದು ಅವೈಜ್ಞಾನಿಕವಾಗಿತ್ತು ಎಂದು…
ಮುಂದೆ ಓದಿ..
