ಐಪಿಎಲ್ ಮಾದರಿಯಲ್ಲಿ ಕಂಬಳ ಆಯೋಜನೆಗೆ ತಯಾರಿ.
ಐಪಿಎಲ್ ಮಾದರಿಯಲ್ಲಿ ಕಂಬಳ ಆಯೋಜನೆಗೆ ತಯಾರಿ. ಕರ್ನಾಟಕ ಸರ್ಕಾರದಿಂದ ರಾಜ್ಯ ಕ್ರೀಡೆಯ ಮಾನ್ಯತೆ ಪಡೆದಿರುವ ಕರಾವಳಿಯ ಜನಪದ ಕ್ರೀಡೆ ಕಂಬಳ ಇದೀಗ ಜಾಗತಿಕ ಮೇಳೆಗೆ ಕಾಲಿಡಲು ಸಜ್ಜಾಗಿದೆ. ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಮಾದರಿಯಲ್ಲಿಯೇ ಅದ್ಧೂರಿಯಾಗಿ ಕಂಬಳ ಆಯೋಜನೆ ಮಾಡುವ ಯೋಜನೆ ರೂಪುಗೊಂಡಿದೆ. ಈ ನೂತನ ಪ್ರಯತ್ನದ ಹಿಂದಿರುವುದು ರಾಜ್ಯ ಕಂಬಳ ಅಸೋಸಿಯೇಷನ್, ಇದರ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಶನಿವಾರ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಸರ್ಕಾರದ ಅನುದಾನ ಅತ್ಯಲ್ಪ… ಪ್ರಸಕ್ತ ಕರಾವಳಿಯಲ್ಲಿ ಪ್ರತಿ ವರ್ಷ ಸುಮಾರು 25 ಕಂಬಳಗಳು ನಡೆಯುತ್ತಿವೆ. ಆದರೆ ಸರ್ಕಾರದಿಂದ ಸಿಗುವ ಅನುದಾನ ತುಂಬಾ ಅಲ್ಪವಾಗಿದೆ. ಕಳೆದ ವರ್ಷ ₹5 ಲಕ್ಷ ನೀಡಿದ್ದರೆ, ಈ ಬಾರಿ ಕೇವಲ ₹2 ಲಕ್ಷಕ್ಕೆ ಸೀಮಿತವಾಗಿದೆ. ಒಂದು ಕಂಬಳ ನಡೆಸಲು ₹25 ರಿಂದ ₹40 ಲಕ್ಷ ವೆಚ್ಚವಾಗುತ್ತದೆ. ಈ ಮೊತ್ತವನ್ನು…
ಮುಂದೆ ಓದಿ..
