ಸುದ್ದಿ 

ಯಲಹಂಕದಲ್ಲಿ ನಿವೃತ್ತ ಸೈನಿಕರ ಆಸ್ತಿಯ ಮೇಲೆ ವಂಚನೆ: ಕುಟುಂಬದ ದೂರಿನ ಮೇಲೆ ತನಿಖೆ ಪ್ರಾರಂಭ

ಬೆಂಗಳೂರು, ಜುಲೈ 6 2025 ಯಲಹಂಕದಲ್ಲಿ ನಿವೃತ್ತ ಭಾರತೀಯ ಸೇನಾ ಯೋಧನಿಗೆ ಸರ್ಕಾರದಿಂದ ಮಂಜೂರಾದ ನಿವೇಶನವನ್ನು ಸುಳ್ಳು ದಾಖಲೆಗಳ ಆಧಾರದಲ್ಲಿ ವಂಚನೆ ಮೂಲಕ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಿವೃತ್ತ ಯೋಧ ರಾಮಯ್ಯ ಅವರ ಪುತ್ರಿ ರಾಮಮ್ಮಣಿ ಕೆ.ಆರ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ತನಿಖೆ ಆರಂಭವಾಗಿದೆ.ದೂರಿನ ಪ್ರಕಾರ, ರಾಮಯ್ಯ ಅವರು ಭಾರತೀಯ ಸೇನೆಯಿಂದ ನಿವೃತ್ತರಾದ ನಂತರ ಸರ್ಕಾರವು ಅವರನ್ನು ಗೌರವಿಸಿ ಯಲಹಂಕದ ಸರ್ವೆ ನಂ. 24 ರಲ್ಲಿ ಇರುವ ನಿವೇಶನ ಸಂಖ್ಯೆ 136 ಅನ್ನು ಉಚಿತವಾಗಿ ನೀಡಿತ್ತು. ಅವರು ಈ ಆಸ್ತಿಯಲ್ಲಿ 20×30 ಅಡಿ ಗಾತ್ರದ ಮನೆ ಕಟ್ಟಿಸಿಕೊಂಡು ಕುಟುಂಬದೊಂದಿಗೆ ವಾಸವಿದ್ದರು. ರಾಮಯ್ಯ ಅವರ ಮೊದಲ ಪತ್ನಿಯಾದ ಚನ್ನಕೃಷ್ಣಮ್ಮ ಅವರಿಂದ ನಾಲ್ಕು ಮಕ್ಕಳಿದ್ದು, ಇಬ್ಬರು ಈಗ ಲೆಟ್ ಆಗಿದ್ದಾರೆ. ಎರಡನೇ ಪತ್ನಿ ರುಕ್ಮಿಣಮ್ಮ ಅವರು ಮಕ್ಕಳಿಲ್ಲದೆ ನಿಧನರಾದರು.ಅವರ ಮಗಳಾದ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಅಮೃತಹಳ್ಳಿಯಿಂದ 19 ವರ್ಷದ ಯುವತಿ ಕಾಣೆ – ಕುಟುಂಬದವರು ಕಳವಳದಲ್ಲಿ

ಬೆಂಗಳೂರು, ಜುಲೈ 6 2025: ನಗರದ ಅಮೃತಹಳ್ಳಿ ಹೊರವಲಯದ ನಿವಾಸಿ ಪಾವನಿ ಕೆ.ಎನ್. ಎಂಬ 19 ವರ್ಷದ ಯುವತಿ ಕಳೆದ ಜುಲೈ 4 ರಂದು ಬೆಳಿಗ್ಗೆ ಮನೆಯಿಂದ ಹೊರಡಿದ ಬಳಿಕ ಮರಳದೇ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಯುವತಿಯ ತಂದೆ ನಾಗಮೂರ್ತಿ ಅವರು ಸ್ಥಳೀಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಗಮೂರ್ತಿ ಅವರ ದೂರಿನ ಪ್ರಕಾರ, ಪಾವನಿ ಕೆ.ಎನ್. ಅವರು ಜುಲೈ 4 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ “ಹೊರಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅಷ್ಟರಲ್ಲಿ ಸಂಜೆವಾಯಿತು, ತಾಯಂದಿರು, ಕುಟುಂಬದವರು ನಿರೀಕ್ಷಿಸಿ ಕಾಯುತ್ತಿದ್ದರೂ ಆಕೆ ಮನೆಗೆ ಮರಳಲಿಲ್ಲ. ಎಲ್ಲಾ ಸನ್ನಿಹಿತಸ್ಥಳಗಳಲ್ಲಿ ಹುಡುಕಿದರೂ ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಗದೆ ಇದ್ದ ಕಾರಣ, ಪೋಷಕರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಕಾಣೆಯಾದ ಯುವತಿಯ ವಿವರಗಳು:ಹೆಸರು: ಪಾವನಿ…

ಮುಂದೆ ಓದಿ..
ಸುದ್ದಿ 

ಜಮೀನಿನ ಹಕ್ಕು ಸಂಬಂಧದ ನಕಲಿ ದಾಖಲೆ: ತಮ್ಮಂದಿರಿಂದಲೇ ರೈತರಿಗೆ ಮೋಸ

! ಬೆಂಗಳೂರು, ಜುಲೈ 6. 2025 ಹೆಸರಘಟ್ಟ ಹೋಬಳಿಯ ಕಕ್ಕೆಹಳ್ಳಿ ಗ್ರಾಮದಲ್ಲಿ ಸಂಬಂಧಿಕರಿಂದಲೇ ಜಮೀನಿನ ಹಕ್ಕು ಸಂಬಂಧಿತ ದಾಖಲೆಗಳನ್ನು ನಕಲಿ ಮಾಡಿ ಮೋಸ ಮಾಡಿದ ಆರೋಪದ ಮೇಲೆ ನಾಲ್ವರು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚಿಕ್ಕೇಗೌಡ ಅವರು ರಾಜನಕುಂಟೆ ಪೊಲೀಸ್ ಠಾಣೆಗೆ ಮದ್ಯಾಹ್ನ 12:45ಕ್ಕೆ ಹಾಜರಾಗಿ ನೀಡಿದ ದೂರಿನ ಪ್ರಕಾರ, ಅವರು ರೈತರಾಗಿದ್ದು, ತಮ್ಮ ತಂದೆ ಲೇಟ್ ಹನುಮಯ್ಯ ಮತ್ತು ತಾಯಿ ಗಂಗಮ್ಮ ಅವರಿಗೆ ಐದು ಮಕ್ಕಳು ಇದ್ದರು. ಅವರ ತಮ್ಮ ಮಂಜುನಾಥ್, ನಾಗರಾಜ್ ಮತ್ತು ತಂಗಿ ಸುನಂದ ಸೇರಿ, ಖಾಲಿ ಪತ್ರದಲ್ಲಿ ಸಹಿ ಹಾಕಿಸಿಕೊಂಡು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಕಲಿ ಜಿಪಿಎ ರೂಪಿಸಿ ಜಮೀನಿನ ವರ್ಗಾವಣೆಚಿಕ್ಕೇಗೌಡರ ಪ್ರಕಾರ, ಅವರು ಓದಿಲ್ಲದ ಖಾಲಿ ಕಾಗದದಲ್ಲಿ ಸಹಿ ಹಾಕಿದ ನಂತರ, ಮಂಜುನಾಥ್ ಹಾಗೂ ಟಿ.ಎಚ್. ನಾಗರಾಜ್ ಅವರು ನಕಲಿ ಜಿಪಿಎ ಸೃಷ್ಟಿಸಿ 2025ರ ಮಾರ್ಚ್ 11ರಂದು ತಾಯಿ ಗಂಗಮ್ಮರ ಸಹಿ ಎಂದು…

ಮುಂದೆ ಓದಿ..
ಸುದ್ದಿ 

ಅಗ್ರಹಾರ್ ಲೇಔಟ್‌ನಲ್ಲಿ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನ

ಬೆಂಗಳೂರು, ಜುಲೈ 6 2025 ನಗರದ ಅಗ್ರಹಾರ್ ಲೇಔಟ್ ಪ್ರದೇಶದಲ್ಲಿ ವಾಹನ ಕಳ್ಳತನದ ಪ್ರಕರಣ ವರದಿಯಾಗಿದೆ. ಕುವೆಂಪು ಲೇಔಟ್ 2ನೇ ಮುಖ್ಯ ರಸ್ತೆಯ ಮನೆಯೊಂದರ ಎದುರು ನಿಲ್ಲಿಸಲಾಗಿದ್ದ ಬೈಕ್ ಅನ್ನು ಗುರುತು ತಿಳಿಯದ ಕಳ್ಳರು ಕದ್ದೊಯ್ದಿದ್ದಾರೆ.ಸಯಾದ್ ನಸೀರ್ ಅಹ್ಮದ್ ಅವರ ಮಾಹಿತಿ ಪ್ರಕಾರ, ಅವರು 27/06/2025 ರಂದು ಸಂಜೆ 5 ಗಂಟೆಗೆ ತಮ್ಮ ಮನೆ ಮುಂದೆ ಕೆಎ 50 ಆರ್ 4438 ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್ (ಮಾದರಿ 2013) ಬೈಕ್ ನಿಲ್ಲಿಸಿದ್ದರು. ಆದರೆ, ಮರು ದಿನ ಬೆಳಿಗ್ಗೆ 7 ಗಂಟೆಗೆ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣಿಸದಿರುವುದನ್ನು ಅವರು ಗಮನಿಸಿದರು.ಸಯಾದ್ ನಜೀರ್ ಅಹ್ಮದ್ ಅವರು ಸುತ್ತಮುತ್ತಲೆಲ್ಲಾ ಹುಡುಕಿದರೂ ವಾಹನ ಪತ್ತೆಯಾಗದೆ ಇರುವುದರಿಂದ ಅವರು ತಡವಾಗಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಯಾರು ಕಳ್ಳರು ಅಂತಹದಾಗಿ ಶಂಕಿಸಿ ಕಾನೂನು ಕ್ರಮ ಕೈಗೊಳ್ಳುವಂತೆ…

ಮುಂದೆ ಓದಿ..
ಅಂಕಣ 

ಜ್ಯೋತಿ ಯಾವ ಜಾತಿ……. ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ

ಜ್ಯೋತಿ ಯಾವ ಜಾತಿ……. ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ ನೆರಳಿನಲ್ಲಿ ಇದ್ದ ತಳ್ಳುಗಾಡಿಯ ಇಸ್ತ್ರಿ ಮಾಡುವ ವ್ಯಕ್ತಿಗೆ ಕೊಟ್ಟು ಆತ ತದೇಕ ಚಿತ್ತದಿಂದ, ಸಂಪೂರ್ಣ ಏಕಾಗ್ರತೆಯಿಂದ ಬಟ್ಟೆಯ ಪ್ರತಿ ಸುಕ್ಕುಗಳನ್ನು ತುಂಬಾ ಶ್ರದ್ಧೆಯಿಂದ ಐರನ್ ಮಾಡುವುದನ್ನು ಹಾಗೇ ನೋಡುತ್ತಾ ನಿಂತ ನನಗೆ ಸಿನಿಮಾ ಶೈಲಿಯ ರೀತಿ ಸುರುಳಿ ಸುರುಳಿಯಾಗಿ ನೆನಪುಗಳ ಬುತ್ತಿ ಬಿಚ್ಚಿಕೊಳ್ಳತೊಡಗಿ ನನ್ನನ್ನು 40 ವರ್ಷಗಳ ಹಿಂದಕ್ಕೆ ಕರೆದೊಯ್ಯಿತು……………..‌‌‌‌‌‌‌……… ನನ್ನಪ್ಪ ಕೂಡ ಬಟ್ಟೆಗಳನ್ನು ಒಗೆಯುವ ಮತ್ತು ಇಸ್ತ್ರಿ ಮಾಡುವ ಕೆಲಸ ಮಾಡುತ್ತಿದ್ದರು. ಊರ ಬೀದಿಯ ಆಲದ ಮರದ ಕೆಳಗೆ ಒಂದು ಮರದ ಉದ್ದದ ಹಲಗೆಯ ಮೇಲೆ ತುಂಬಾ ತೂಕದ ಕಬ್ಬಿಣದ ಒಂದು ಇಸ್ತ್ರಿ ಪೆಟ್ಟಿಗೆ ಇಟ್ಟುಕೊಂಡಿದ್ದರು. ಪಕ್ಕದಲ್ಲೇ ಇದ್ದಿಲು ಹಾಕುವ ಒಂದು ಒಲೆ. ತಲೆಗೆ ಟವಲು ಸುತ್ತಿದ ಪಟಾಪಟಿ ಚೆಡ್ಡಿಯ ಹರಕಲು ಬನಿಯನ್ನಿನ, ಕೆದರಿದ ತಲೆಯ, ಕುರುಚಲು ಗಡ್ಡದ, ಕಪ್ಪುಬಣ್ಣದ…

ಮುಂದೆ ಓದಿ..
ಸುದ್ದಿ 

ಬೆಟ್ಟಹಳ್ಳಿ ಜಂಕ್ಷನ್ ಬಳಿ ಕಾರು ಡಿಕ್ಕಿ: ಮಹಿಳೆಗೆ ಗಂಭೀರ ಗಾಯ

ಯಲಹಂಕ, ಜುಲೈ 6 2025 ಬೆಳಿಗ್ಗೆ ಸುಮಾರು 9:15ರಿಂದ 9:30ರ ಸಮಯದಲ್ಲಿ ಯಲಹಂಕ ತಾಲ್ಲೂಕಿನ ಬೆಟ್ಟಹಳ್ಳಿ ಜಂಕ್ಷನ್ ಬಳಿ ಸಂಭವಿಸಿದ ಅಪಘಾತದಲ್ಲಿ 47 ವರ್ಷದ ಮಹಿಳೆಗೆ ಗಂಭೀರ ಗಾಯಗಳಾಗಿವೆ.ಶ್ರೀಮತಿ ನಾಗಮ್ಮ ಅವರು ತಮ್ಮ ಸ್ಕೂಟರ್ (ಎ-50-ಎಲ್‌ಎ 4547) ಅನ್ನು ಚಲಾಯಿಸುತ್ತಾ ಮನೆಯಿಂದ ಬೆಟ್ಟಹಳ್ಳಿ ಜಂಕ್ಷನ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹೆಚ್ಚಿನ ವೇಗದಲ್ಲಿ ಬಂದ ಕಾರು (ಕೆಎ-04-ಎಂ.ಟಿ.8128) ಅವರು ಸಾಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ಅವರು ರಸ್ತೆ ಮೇಲೆ ಬಿದ್ದು ಎಡಗಜಲ ಬೆರಳುಗಳಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ನಂತರ ಅವರು ತಕ್ಷಣ ಸ್ಥಳದಲ್ಲಿ ಸ್ಕೂಟರ್ ಅನ್ನು ಬಿಟ್ಟು ದೇವನಹಳ್ಳಿಗೆ ಕೆಲಸಕ್ಕಂತೆ ಹೋಗಿದ್ದಾರೆ ಯಲಹಂಕ ಸಂಚಾರಿ ಪೊಲೀಸರಿಗೆ ದೂರು ನೀಡಲು ತೆರಳಿದರು. ಬಳಿಕ ಸಹೋದ್ಯೋಗಿಗಳ ಸಹಾಯದಿಂದ ಅವರನ್ನು ದೇವನಹಳ್ಳಿಯ ಮಾನಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ಯಲಹಂಕ ಸಂಸಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ…

ಮುಂದೆ ಓದಿ..
ಸುದ್ದಿ 

ಅತಿವೇಗದ ಟಾಟಾ ಏಸ್ ಡಿಕ್ಕಿ: ಬೈಕ್ ಸವಾರನಿಗೆ ತೀವ್ರ ಗಾಯ

ಬೆಂಗಳೂರು, ಜುಲೈ 6– 2025ಇಂದು ಬೆಳಿಗ್ಗೆ 6:15ರ ಸುಮಾರಿಗೆ ನಡೆದ ದೌರ್ಘಟನೆ ಪ್ರಕಾರ, ಕೆಲಸ ಮುಗಿಸಿಕೊಂಡು ಮನೆಯತ್ತ ಬರುತ್ತಿದ್ದ ವ್ಯಕ್ತಿಯೊಬ್ಬನು ಟಾಟಾ ಏಸ್ ವಾಹನದಿಂದ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿಟ್ಟಣ್ಣ ರೈ ವ್ಯಕ್ತಿ ತನ್ನ ರಾಯಲ್ ಎನ್‌ಫೀಲ್ಡ್ ಹಿಮಾಲಯ (ನಂ. KA-05-0412) ಬೈಕ್‌ನಲ್ಲಿ ಸಂಚರಿಸುತ್ತಿದ್ದು, ಈ ವೇಳೆ ಹಿಂದಿನಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ (ನಂ. KA-52-8745) ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ, ಬೈಕ್ ಸವಾರ ರಸ್ತೆ ಮೇಲೆ ಬಿದ್ದು, ಎಡ ಭಾಗಕ್ಕೆ ಹಾಗೂ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಗಾಯಗಳು ಗಂಭೀರವಾಗಿದ್ದು, ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ವೈದ್ಯರು ಕಣ್ಣಿಡುತ್ತಿದ್ದಾರೆ. ಘಟನೆಯ ಕುರಿತು ಕಿಟ್ಟಣ್ಣ ರೈ ವ್ಯಕ್ತಿಯ ದೂರಿನ ಮೇರೆಗೆ, ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅತಿವೇಗ…

ಮುಂದೆ ಓದಿ..
ಸುದ್ದಿ 

ದೇವಾಲಯದಲ್ಲಿ ಕಳ್ಳತನ: 40 ಗ್ರಾಂ ಚಿನ್ನದ ಆಭರಣ ಕಳವು, ಅರ್ಚಕರಿಂದ ದೂರು..

ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿಯ ಜೋಡಿ ನೇರಲಕೆರೆ ಗ್ರಾಮದ ಶ್ರೀ ಪಟ್ಟಲದಮ್ಮ ದೇವಾಲಯದಲ್ಲಿ ಕಳ್ಳತನದ ಘಟನೆ ಸಂಭವಿಸಿದೆ. ಈ ಕುರಿತು ದೇವಾಲಯದ ಅರ್ಚಕರೂ ಆಗಿರುವ ಮಹದೇವಪ್ಪ ಎನ್.ಡಿ. (47), ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮಹದೇವಪ್ಪ ಅವರು ನೀಡಿದ ಮಾಹಿತಿಯಂತೆ, ದೇವಾಲಯವು ಗ್ರಾಮದಿಂದ ಒಂದು ಕಿಲೋಮೀಟರ್ ದೂರದ ಪೂರ್ವ ದಿಕ್ಕಿನಲ್ಲಿ ಇದೆ. ಪ್ರತಿದಿನದಂತೆ ಅವರು ಪೂಜೆ ಮುಗಿಸಿ, ದೇವಸ್ಥಾನದ ಮುಂಭಾಗದ ಕಬ್ಬಿಣದ ಬಾಗಿಲಿಗೆ ಬೀಗ ಹಾಕಿ ಮನೆಗೆ ಹಿಂದಿರುಗಿದ್ದರು.ಆದರೆ, ಮುಂದಿನ ಅವರು ದೇವಸ್ಥಾನಕ್ಕೆ ಹೋದಾಗ, ಬಾಗಿಲು ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತು. ದೇವಾಲಯದ ಒಳಾಂಗಣದಲ್ಲಿ ಇಟ್ಟಿದ್ದ ಕಬ್ಬಿಣದ ಬೀರುವಿನ ಲಾಕರ್ ಕೂಡ ಮುರಿಯಲ್ಪಟ್ಟಿದ್ದು, ಅದರಲ್ಲಿ ಇಟ್ಟಿದ್ದ ದೇವರ ಸೀರೆ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು, ಲಾಕರ್ ತೆರೆದ ಸ್ಥಿತಿಯಲ್ಲಿ ಕಂಡುಬಂದಿದೆ. ದೇವಸ್ಥಾನದ ಒಳಾಂಗಣದಲ್ಲಿ ಇಟ್ಟಿದ್ದ ಕಬ್ಬಿಣದ ಗೋಲಕವನ್ನು ಪಕ್ಕದ ಪೊದೆಯೊಳಗೆ ಎಸೆದು ಹಾಕಲಾಗಿತ್ತು.ಪರಿಶೀಲನೆ ನಡೆಸಿದಾಗ, ದೇವಾಲಯದ ಉತ್ಸವ ಹಾಗೂ ವಿಶೇಷ ದಿನಗಳಲ್ಲಿ…

ಮುಂದೆ ಓದಿ..
ಸುದ್ದಿ 

ಮಹಿಳೆಯ ಕತ್ತಿನಿಂದ ಚಿನ್ನದ ಮಾಂಗಲ್ಯ ಸರ ಕಿತ್ತೆ ಎಳೆದ ಅಪರಿಚಿತರು.. ಇಬ್ಬರು ಸ್ಕೂಟಿಯಲ್ಲಿ ಪರಾರಿ

ನಾಗಮಂಗಲ : ಅರೆಹಳ್ಳಿ–ಅಂಚಿಬೂವನಹಳ್ಳಿ ಮಾರ್ಗದ ಬಳಿ ನಡೆದ ದಿಟ್ಟ ಅಪಹರಣ ಪ್ರಕರಣದಲ್ಲಿ, ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಇಬ್ಬರು ಅಪರಿಚಿತರು ಕಿತ್ತೆ ಎಳೆದಿದ್ದು, ಸ್ಕೂಟಿಯಲ್ಲಿ ಪರಾರಿಯಾದ ಘಟನೆ ನಡೆದಿದೆ.ನಿಂಗಮ್ಮ ಅವರ ಮಾಹಿತಿ ಪ್ರಕಾರ, ಅವರು ಪ್ರತಿದಿನದಂತೆ ತಮ್ಮ ಮನೆಯ ಹತ್ತಿರ ಇರುವ ಕೊಟ್ಟಿಗೆಗೆ ಮೇವು ತುಂಬಿಕೊಂಡು ಹೋಗುತ್ತಿದ್ದಾಗ, ಈ ಘಟನೆ ನಡೆದಿದೆ. ಅವರು ತಲೆಯ ಮೇಲೆ ಮೇವು ತುಂಬಿದ ಮಂಕರಿಯನ್ನು ಹೊತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದಾಗ, ಅರೆಹಳ್ಳಿ ಕಡೆಯಿಂದ ಬಂದು ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆ ಬದಿ ನಿಲ್ಲಿಸಿ, ಅವರ ಪಕ್ಕದಲ್ಲಿ ನಿಂತು, ಒಬ್ಬನು ಸ್ಕೂಟಿಯಿಂದ ಇಳಿದು ನಿಂಗಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತೆಳೆದಿದ್ದಾರೆ. ಅವರ ಕತ್ತಿನಲ್ಲಿ ಇದ್ದ ಚಿನ್ನದ ಸರದಲ್ಲಿ 40 ಗ್ರಾಂ ತೂಕದ ಮಾಂಗಲ್ಯ, 1 ಗ್ರಾಂ ತೂಕದ ಎರಡು ಚಿನ್ನದ ಗುಂಡುಗಳು,…

ಮುಂದೆ ಓದಿ..
ಸುದ್ದಿ 

ಮೆಟ್ರೋ ವಿಳಂಬಕ್ಕೆ ಭ್ರಷ್ಟಾಚಾರವೇ ಕಾರಣ: ಜೀವನ್ ಎಲ್

ನಗರದಲ್ಲಿ ಮೆಟ್ರೋ ಯೋಜನೆಗಳು ನಿರಂತರವಾಗಿ ವಿಳಂಬಕ್ಕೆ ಒಳಗಾಗುತ್ತಿದ್ದು, ಅದರ ಹಿಂದಿನ ಕಾರಣ ಭ್ರಷ್ಟಾಚಾರ ಮತ್ತು ಅಕ್ರಮಗಳೇ ಎಂದು ಜೀವನ್ ಎಲ್. ಆರೋಪಿಸಿದ್ದಾರೆ. ಅವರು ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಪಶ್ಚಿಮ ಜಿಲ್ಲೆಯ ಉಸ್ತುವಾರಿ ಹುದ್ದೆ ವಹಿಸಿಕೊಂಡಿದ್ದಾರೆ.ಇತ್ತೀಚೆಗೆ ಬಿಎಂಪಿಆರ್ಸಿಎಲ್ (BMRCL) ಹಳದಿ ಮಾರ್ಗದ ಕಾರ್ಯಾರಂಭವನ್ನು ಆಗಸ್ಟ್‌ನಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದ್ದು, ಅದೂ ಕೂಡ ಪದೇ ಪದೇ ಮುಂದೂಡುತ್ತಲೇ ಬಂದಿದೆ. ಈ ಹಂತದ ವಿಳಂಬ ಕೇವಲ ಹೊಸ ಮಾರ್ಗಗಳಿಗೆ ಮಾತ್ರವಲ್ಲದೆ, ಇತಿಹಾಸದಲ್ಲಿಯೆ ಎಲ್ಲ ಮಾರ್ಗಗಳಿಗೂ ಅನ್ವಯಿಸುತ್ತದೆ.“ಮೆಟ್ರೋ ಕಾಮಗಾರಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ಹಾಗೂ ಅಕ್ರಮಗಳು ವ್ಯಾಪಕವಾಗಿ ನಡೆದಿವೆ. ಇವುಗಳನ್ನು ತಡೆದಿಲ್ಲದಿದ್ದರೆ, ಮತ್ತಷ್ಟು ವರ್ಷಗಳ ಕಾಲ ಈ ದುಃಸ್ಥಿತಿ ಮುಂದುವರೆಯಲಿದೆ,” ಎಂದು ಅವರು ಹೇಳಿದರು.ಜೀವನ್ ಎಲ್. ಆರೋಪಿಸಿದ್ದೇನೆಂದರೆ, ಸರ್ಕಾರ ಹಾಗೂ ವಿರೋಧ ಪಕ್ಷ ಕ್ಷುಲ್ಲುಕ ರಾಜಕಾರಣದಲ್ಲಿ ತೊಡಗಿಕೊಂಡಿದ್ದು, ನಿಜವಾದ ಸಮಸ್ಯೆಗಳತ್ತ ಮುಖಮಾಡುತ್ತಿಲ್ಲ. ಬಿಎಂಪಿಆರ್ಸಿಎಲ್ ಈಗವರೆಗೆ ಯಾವುದೇ ಕಾಮಗಾರಿಯನ್ನು ಘೋಷಿತ ಸಮಯಕ್ಕೆ ಮುಕ್ತಾಯಗೊಳಿಸಿಲ್ಲ. ಪ್ರಸ್ತುತ…

ಮುಂದೆ ಓದಿ..