ಸುದ್ದಿ 

ನಕಲಿ ದಾಖಲೆ ಮೂಲಕ ನಿವೇಶನ ಕಬಳಿಕೆ ಯತ್ನ

ಬೆಂಗಳೂರು: ಆಗಸ್ಟ್ 12 2025ಚಿಕ್ಕ ಬೆಟ್ಟಹಳ್ಳಿ ಗ್ರಾಮದಲ್ಲಿ ನಿವೇಶನ ಸಂಖ್ಯೆ 8ನ್ನು ನಕಲಿ ದಾಖಲೆ ಮೂಲಕ ಕಬಳಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಪೀಡಿತ ರಮೇಶ್ ಅವರು 2017ರಲ್ಲಿ ನಿವೇಶನವನ್ನು ಕಾನೂನುಬದ್ದವಾಗಿ ಖರೀದಿ ಮಾಡಿ, ಶೆಡ್ ನಿರ್ಮಿಸಿ ವಾಸಿಸುತ್ತಿದ್ದರು. ಆದರೆ ಕೆ. ವೇಣುಗೋಪಾಲ್ ಎಂಬಾತ, ನಕಲಿ ಕೆ. ನಾಗರಾಜ್ ಮತ್ತು ಜಯಲಕ್ಷ್ಮಿ ಎಂದು ತೋರಿಸಿದವರ ಸಹಾಯದಿಂದ 2015ರಲ್ಲಿ ನಕಲಿ ಗಿಫ್ಟ್ ಡೀಡ್ ಸೃಷ್ಟಿಸಿ, ಅದನ್ನು ಎ. ಅಮರನಾಥ ರೆಡ್ಡಿಗೆ ಹಸ್ತಾಂತರ ಮಾಡಿದ್ದಾನೆ. ಅಮರನಾಥ ರೆಡ್ಡಿ ಆ ನಕಲಿ ದಾಖಲೆ ಆಧರಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಸಾಲ ಪಡೆದಿದ್ದಾನೆ. ಬ್ಯಾಂಕ್ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡದೇ ಸಾಲ ನೀಡಿರುವ ಆರೋಪ ಇದೆ. ಪೀಡಿತರು ಆರೋಪಿಗಳೊಂದಿಗೆ ಬ್ಯಾಂಕ್ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಆಸ್ತಿ ವಂಚನೆ – ನಕಲಿ ದಾಖಲೆಗಳ ಮೂಲಕ ಕಬಳಿಕೆ ಯತ್ನ

ಬೆಂಗಳೂರು: ಆಗಸ್ಟ್ 12 2025ಯಲಹಂಕ ತಾಲೂಕಿನ ಕುವೆಂಪುನಗರದ ಸಿಂಗಾಪುರ ಗ್ರಾಮದಲ್ಲಿ ಆಸ್ತಿ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ದಿವ್ಯ ಅವರ ಹೇಳಿಕೆಯ ಪ್ರಕಾರ, 2010ರಲ್ಲಿ ಅವರು ಸೈಟ್ ನಂ.109ರಲ್ಲಿ ಮನೆ ನಿರ್ಮಿಸಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ತಾಯಿ ನಿಧನದ ಬಳಿಕ 2024ರ ಜನವರಿ ಮೊದಲ ವಾರದಲ್ಲಿ ಆರೋಪಿಗಳಾದ ಎ2 ಮತ್ತು ಎ3ರು ಅನುಮತಿ ಇಲ್ಲದೇ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ಬಾಡಿಗೆಗೆ ನೀಡಲು ಯತ್ನಿಸಿದರು. ತನಿಖೆಯಲ್ಲಿ, ಆರೋಪಿಗಳು ಎ1ರಿಂದ ಉಡುಗೊರೆಯಾಗಿ ಪಡೆದಿದ್ದೇವೆಂದು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬಹಿರಂಗವಾಗಿದೆ. ಪಿರ್ಯಾದಿಯ ಪ್ರಕಾರ, ಈ ಮೂವರು ಆರೋಪಿಗಳು ಸುಳ್ಳು ದಾಖಲೆಗಳ ಆಧಾರದ ಮೇಲೆ ಆಸ್ತಿಯನ್ನು ಕಬಳಿಸಲು ಬೆದರಿಕೆ ಹಾಕಿದ್ದು, ವಂಚನೆಗೆ ಮುಂದಾಗಿದ್ದಾರೆ. ವಿದ್ಯಾರಣ್ಯಪುರ ಪೊಲೀಸರು ಎ1, ಎ2 ಮತ್ತು ಎ3ರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಮನೆಯ ಕಿಟಕಿಯಿಂದ ಚಿನ್ನ ಮತ್ತು ನಗದು ಕಳವು

ಬೆಂಗಳೂರು ಆಗಸ್ಟ್ 12 2025 ನಗರದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ 8, 2025 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶಿವಣ್ಣ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ದೂರುದಾರರು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ 20 ಗ್ರಾಂ ತೂಕದ ಚಿನ್ನದ ಸರ ಮತ್ತು ₹2000 ನಗದು ಇಟ್ಟು, ಅದನ್ನು ಕೋಣೆಯ ಅಲಮಾರಿಯ ಮೇಲೆ ನೇತು ಹಾಕಿದ್ದರು. ಮಲಗಿಕೊಂಡಿದ್ದ ಸಮಯದಲ್ಲಿ, ಮನೆಯ ಹಿಂಭಾಗದ ಕಿಟಕಿಯ ಮೂಲಕ ಉದ್ದವಾದ ಕಟ್ಟಿಗೆಯನ್ನು ಬಳಸಿಕೊಂಡು ಅಪರಿಚಿತ ಕಳ್ಳನು ಬ್ಯಾಗ್ ಎಗರಿಸಿದನು. ನಂತರ ಅದರಲ್ಲಿದ್ದ ಚಿನ್ನದ ಸರ ಮತ್ತು ನಗದು ಕಸಿದು, ಖಾಲಿ ಬ್ಯಾಗ್ ಅನ್ನು ಪ್ಯಾಸೇಜ್‌ನಲ್ಲಿ ಬಿಸಾಕಿ ಪರಾರಿಯಾದನು. ಘಟನೆಯ ಸಂಬಂಧ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳನ ಪತ್ತೆಗಾಗಿ ತನಿಖೆ ಮುಂದುವರಿಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಕೆಲವೇ ಗಂಟೆಗಳ ಮುನ್ನ ಒಂದು ಆತ್ಮಾವಲೋಕನ ಮತ್ತು ಪ್ರತಿಜ್ಞಾ ವಿಧಿ……………

ಭಾರತದ ಸ್ವಾತಂತ್ರ್ಯ…….ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಕೆಲವೇ ಗಂಟೆಗಳ ಮುನ್ನ ಒಂದು ಆತ್ಮಾವಲೋಕನ ಮತ್ತು ಪ್ರತಿಜ್ಞಾ ವಿಧಿ……………ಉಕ್ಕಿ ಹರಿಯುವ ದೇಶಪ್ರೇಮ………..ಎಲ್ಲೆಲ್ಲೂ ರಾಷ್ಟ್ರಗೀತೆ – ರಾಷ್ಟ್ರಧ್ವಜ…….ಜೈ ಭಾರತ್ ಘೋಷಣೆ……ತುಂಬಾ ಸಂತೋಷ……ಆದರೆ,ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ………ಇದೇ ಬಾಯಿಗಳೇ ದ್ವೇಷ ಕಾರುವ, ರಕ್ತ ಹೀರುವ ಘೋಷಣೆ ಕೂಗುವುದು…..ಇದೇ ಕಣ್ಣುಗಳೇ  ಸಾವುಗಳನ್ನು ಸಂಭ್ರಮಿಸಿ ಕ್ರೂರತೆ ಮೆರೆಯುವುದು….ಇದೇ ಕೈಗಳೇ ಭ್ರಷ್ಟ ಲಂಚದ ಹಣಕ್ಕೆಕೈ ಚಾಚುವುದು…..ಇದೇ ಕಾಲುಗಳೇ ಹಣ, ಹೆಂಡ ಪಡೆದು ಮತದಾನ ಕೇಂದ್ರಕ್ಕೆ  ಸಾಗುವುದು….ಇದೇ ತೋಳುಗಳೇ ಅತ್ಯಾಚಾರಕ್ಕೆ ಬಳಸಲ್ಪಡುವುದು….ಇದೇ ಮನಸ್ಸುಗಳೇ ಇಂದು ದೇಶದಲ್ಲಿ ಅರಾಜಕತೆ ಅಸಹಿಷ್ಣತೆ ಉಂಟು ಮಾಡುತ್ತಿರುವುದು………..ಜನರನ್ನು ಟೀಕಿಸಿದ್ದಕ್ಕೆ ಬೇಸರವಾಗುತ್ತಿದೆಯೇ ?ಬನ್ನಿ ನನ್ನೊಂದಿಗೆ…..ಇಡೀ ದೇಶದ ಸರ್ಕಾರಿ ಕಚೇರಿಗಳಲ್ಲಿ, ಆಸ್ಪತ್ರೆಯಿಂದ ವಿಧಾನಸೌದದವರೆಗೆ,ಜಮೀನು ನೋಂದಣಿ ಕಚೇರಿಯಿಂದ ಮರಣ ನೋಂದಣಿ ಕಚೇರಿಯವರೆಗೆ ಲಂಚವಿಲ್ಲದೆ ಕೆಲಸವಾಗುವುದು ಅಪರೂಪ.ಒಡವೆ ಧರಿಸಿದ ಒಂಟಿ ಹೆಣ್ಣು ಇಲ್ಲಿ ಸುರಕ್ಷಿತ ಎಂದು ಹೇಳುವ ಒಂದೇ ಒಂದು ಜನನಿಬಿಡ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣವನ್ನು ತೋರಿಸಿ.ಕಾನೂನು ತಜ್ಞರ ಸಲಹೆ…

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ರಿಂಗ್‌ರಸ್ತೆಯಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಮಹಿಳೆ ಗಂಭೀರ ಗಾಯ

ಬೆಂಗಳೂರು, ಆ.08 – ಬೆಳಗಿನ ಜಾವ ಹೆಬ್ಬಾಳ ರಿಂಗ್‌ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಪೊಲೀಸರ ಮಾಹಿತಿಯಂತೆ, ಪರಶುರಾಮ್ ಅವರ ಮಗಳಾದ ನೇಹಾ ಪಿ. ಗಡ್ಕರಿ (30) ಅವರು ಶುಕ್ರವಾರ ಬೆಳಿಗ್ಗೆ ಸುಮಾರು 6.30 ರಿಂದ 6.40ರ ವೇಳೆಗೆ ತಮ್ಮ ಸ್ಕೂಟರ್ (ನಂಬರ KA-04-KW-0201) ನಲ್ಲಿ ಮನೆಯಿಂದ ಆಫೀಸ್‌ಗೆ ತೆರಳುತ್ತಿದ್ದರು. ಲುಂಬಿನಿ ಗಾರ್ಡನ್‌ ವೀರಣ್ಯಪಾಳ್ಯ ಅಪ್‌ರ್ಯಾಂಪ್ ಹತ್ತಿರ ವೇಗ ಹಾಗೂ ನಿರ್ಲಕ್ಷ್ಯದಿಂದ ಸವಾರಿ ಮಾಡುವ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ತಲೆಗೆ ಪೆಟ್ಟಾಗಿದ್ದಾಳೆ. ಸಾರ್ವಜನಿಕರ ನೆರವಿನಿಂದ ಪ್ರೈವೇಟ್ ಆಂಬ್ಯುಲೆನ್ಸ್ ಮೂಲಕ ಅವರನ್ನು ತಕ್ಷಣವೇ ಆಸ್ಟರ್ CMI ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ಮಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರಿಂದ ದೂರುವನ್ನು ತಡವಾಗಿ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಮುಂದೆ ಓದಿ..
ಸುದ್ದಿ 

ಬಿ.ಕಾಂ ವಿದ್ಯಾರ್ಥಿ ನಾಪತ್ತೆ – ಹುಡುಕಾಟ ಜೋರಾಗಿದೆ

ಬೆಂಗಳೂರು, – ನಗರದ ಸರ್ಮಾಪುರದಲ್ಲಿರುವ ಎಸ್.ವಿ.ಪಿ. ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಕೆ. ಮಂಜುನಾಥ್ (ವಯಸ್ಸು ಅಂದಾಜು 21) ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಾತೃ ಫೌಂಡೇಷನ್‌ನಲ್ಲಿ ಸುಮಾರು 7 ವರ್ಷಗಳಿಂದ ವಾಸಿಸುತ್ತಿದ್ದ ಮಂಜುನಾಥ್‌ರನ್ನು, ಜು. 6 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಸಂಸ್ಥೆಯ ಚಾಲಕರಾದ ಕುಮಾರಸ್ವಾಮಿ ಕಾಲೇಜಿಗೆ ಬಿಟ್ಟಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಲೇಜಿನ ಪ್ರಾಂಶುಪಾಲರು ಕರೆ ಮಾಡಿ, ವಿದ್ಯಾರ್ಥಿ ಕಾಣೆಯಾಗಿರುವುದಾಗಿ ಫೌಂಡೇಷನ್‌ಗೆ ತಿಳಿಸಿದ್ದಾರೆ. ಘಟನೆಯ ನಂತರ ಕಾಲೇಜು ಆವರಣ, ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಬೆಂಗಳೂರು ಮೆಜೆಸ್ಟಿಕ್ ಭಾಗಗಳಲ್ಲಿ ಹುಡುಕಾಟ ನಡೆಸಿದರೂ, ಮಂಜುನಾಥ್ ಪತ್ತೆಯಾಗಿಲ್ಲ. ಹುಡುಗನ ತಂದೆ-ತಾಯಿಗೆ ವಿಷಯ ತಿಳಿಸಲಾಗಿದ್ದು, ಮಂಜುನಾಥ್ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ನ್ಯಾರೋ ಬ್ರಿಡ್ಜ್ ಬಳಿ ಬಸ್-ಸ್ಕೂಟರ್ ಡಿಕ್ಕಿ: ಮಹಿಳೆಗೆ ಗಂಭೀರ ಗಾಯ

ಬೆಂಗಳೂರು, ಆಗಸ್ಟ್ 9 – ಹೆಬ್ಬಾಳದ ಬಿ.ಬಿ. ರಸ್ತೆಯ ನ್ಯಾರೋ ಬ್ರಿಡ್ಜ್ ಬಳಿ ಇಂದು ಸಂಜೆ ಸಂಭವಿಸಿದ ಬಸ್-ಸ್ಕೂಟರ್ ಡಿಕ್ಕಿ ಘಟನೆಯಲ್ಲಿ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರ ಮಾಹಿತಿ ಪ್ರಕಾರ, ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ ಸೌಮ್ಯ ಲತಾ ಕೊಂ ಹೊನ್ನೆಗೌಡ (40) ಅವರು ತಮ್ಮ ಸ್ಕೂಟರ್ (KA-04-JH-1451) ಮೇಲೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಯಲಹಂಕ ದಿಕ್ಕಿಗೆ ಸಾಗುತ್ತಿದ್ದ ಬಿ.ಎಂ.ಟಿ.ಸಿ ಬಸ್ (KA-57-F-5827) ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಿಂದ ಸೌಮ್ಯ ಲತಾ ಕೆಳಗೆ ಬಿದ್ದು ಬಲಗೈ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮವಾಗಿ ಬಲಗೈ ಹರಿದು ಭುಜಕ್ಕೂ ಪೆಟ್ಟಾಗಿದೆ. ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಬಸ್ ಚಾಲಕ ತಕ್ಷಣ ಅವರನ್ನು ಆಸ್ಮರ್ ಸಿ.ಎಂ.ಐ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಹೆಬ್ಬಾಳ ಟ್ರಾಫಿಕ್ ಪೊಲೀಸರು…

ಮುಂದೆ ಓದಿ..
ಸುದ್ದಿ 

ಮದುವೆ ವಾಗ್ದಾನ ತಪ್ಪಿಸಿದ ಯುವಕನ ವಿರುದ್ಧ ದೂರು

ಬೆಂಗಳೂರು, ಆ.09 : ಮದುವೆಯಾಗುವುದಾಗಿ ವಾಗ್ದಾನ ಮಾಡಿ, ನಂತರ ನಿರಾಕರಿಸಿದ ಪ್ರಕರಣವೊಂದು ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕಾರ, 2023ರ ಮಾರ್ಚ್‌ನಲ್ಲಿ ಹರೀಶ್ ಬಾಬು ಎಂಬಾತನು ಮದುವೆಯಾಗುವುದಾಗಿ ಹೇಳಿ, ತಮ್ಮೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ. ಈ ಅವಧಿಯಲ್ಲಿ ತಾವು ಹಣ ಹಾಗೂ ಆಭರಣಗಳನ್ನು ನೀಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ, ಹರೀಶ್ ಬಾಬು “ನೀನು ನನಗೆ ಬೇಡ, ನಾನು ಬೇರೆ ಹುಡುಗಿಯನ್ನು ಮದುವೆಯಾಗುತ್ತೇನೆ” ಎಂದು ಹೇಳಿ, ಕರೆ-ಮೆಸೇಜ್ ಮಾಡದಂತೆ ಬೆದರಿಕೆ ಹಾಕುತ್ತಿದ್ದಾನೆಂದು ಆರೋಪಿಸಿದ್ದಾರೆ. ಅಂತೋಣಿ ರಾಜ್ ಎಂಬಾತನು ಹರೀಶ್ ಬಾಬುಗೆ ತಮ್ಮ ಬಗ್ಗೆ ಸುಳ್ಳು ಆರೋಪಗಳನ್ನು ಹೇಳಿ, ಇವರಿಬ್ಬರ ಸಂಬಂಧ ಹಾಳುಮಾಡಲು ಕಾರಣನಾಗಿದ್ದಾನೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ಕೇಸು ವಾಪಸ್ಸು ಪಡೆಯುವಂತೆ ಹರೀಶ್ ಬಾಬು ಒತ್ತಾಯಿಸುತ್ತಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಚಂಬೇನಹಳ್ಳಿಯಲ್ಲಿ ಮಹಿಳೆಯ ಚಿನ್ನದ ಚೈನ್ ಕಳವು

ಚಂಬೇನಹಳ್ಳಿ, ಆಗಸ್ಟ್ 9:ಚಂಬೇನಹಳ್ಳಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಚೈನ್ ಕಳವುಗೊಳ್ಳುವ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಸಂಜೆ ಸುಮಾರು 4.30ರ ವೇಳೆಗೆ, ಸ್ಥಳೀಯ ಮಹಿಳೆಯೊಬ್ಬರು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಚಂಬೇನಹಳ್ಳಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವಿಳಾಸ ವಿಚಾರಿಸುವ ನೆಪದಲ್ಲಿ ಮಾತನಾಡಿಸಿದ್ದಾರೆ. ಮಹಿಳೆ ಮಾತುಕತೆ ನಡೆಸುತ್ತ ಸ್ವಲ್ಪ ಮುಂದೆ ಸಾಗಿದ ನಂತರ, ತಮ್ಮ ಕುತ್ತಿಗೆಯಲ್ಲಿದ್ದ ಸುಮಾರು 80 ಗ್ರಾಂ ತೂಕದ ಚಿನ್ನದ ಚೈನ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಆರೋಪಿ ಇಬ್ಬರು ವೇಗವಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಬಳಿಕ ಮಹಿಳೆ ಮನೆಗೆ ಹೋಗಿ ಮಗನಿಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸಿದರೂ ಚೈನ್ ಪತ್ತೆಯಾಗಿಲ್ಲ. ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ಆರೋಪಿಗಳ ಪತ್ತೆ ಹಾಗೂ ಕಳವುಗೊಂಡ ಚೈನ್ ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಮುಂದೆ ಓದಿ..
ಸುದ್ದಿ 

ಬಾಡಿಗೆ ಮನೆ ವಿವಾದ – ದಂಪತಿಗೆ ಹಲ್ಲೆ, ಬೆದರಿಕೆ

ದೊಡ್ಡಬಳ್ಳಾಪುರ: ಆಗಸ್ಟ್ 11 2025ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ದಂಪತಿಗೆ ಮನೆ ಮಾಲೀಕರು ಹಾಗೂ ಸಹಚರರು ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ ಘಟನೆ ರಾಜನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎ.ಎಲ್. ಗಾಯತ್ರಿ ಅವರು ನೀಡಿದ ದೂರಿನ ಪ್ರಕಾರ, 2023ರಿಂದ ಶಿವಣ್ಣ ಎಂಬುವವರ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸುತ್ತಿದ್ದರು. 2024ರಲ್ಲಿ ಪತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮೂರು ತಿಂಗಳು ಬಾಡಿಗೆ ಪಾವತಿಸಲು ವಿಳಂಬವಾಯಿತು. ಇದರಿಂದ ಆಕ್ರೋಶಗೊಂಡ ಮನೆ ಮಾಲೀಕರು ಶಿವಣ್ಣ ಮತ್ತು ರವಿಕುಮಾರ್ ಅವರು ಮನಗೆ ಬೀಗ ಹಾಕಿ, ಬೈದು, ದೈಹಿಕ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ಗೋವಿಂದ ಎಂಬುವವರ ಸಹಾಯದಿಂದ ರೌಡಿಗಳನ್ನು ಕರೆಸಿ, ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು, ಮನೆಯಲ್ಲಿದ್ದ ₹60,000 ನಗದು, ಬಂಗಾರದ ಒಲೆ, ಬಟ್ಟೆಗಳು ಹಾಗೂ ಅಡುಗೆ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರಾಜನಕುಂಟೆ ಪೊಲೀಸರು ಆರೋಪಿಗಳಾದ ಶಿವಣ್ಣ, ರವಿಕುಮಾರ್…

ಮುಂದೆ ಓದಿ..