” ನನ್ನ ಜಾತಿ”
” ನನ್ನ ಜಾತಿ” ಮರುಜಾತಿ ಜನಗಣತಿ ಪ್ರಾರಂಭವಾಗಿದ್ದೇ ತಡ ಎಲ್ಲಾ ಜಾತಿ ನಾಯಕರ ಮುಖವಾಡಗಳು ಬಯಲಾಗುತ್ತಿದೆ. ತನ್ನ ಜಾತಿ ಜನರ ಸಂಖ್ಯೆ ಹೆಚ್ಚಾಗಿ ದಾಖಲಾಗಬೇಕು, ಆ ಮೂಲಕ ತಮಗೆ ರಾಜಕೀಯವಾಗಿ ಹೆಚ್ಚು ಲಾಭ ಸಿಗಬೇಕು, ತಾವು ಪ್ರಬಲ ಜಾತಿ ಎಂದು, ಅಂದರೆ ಹೆಚ್ಚು ಜನಸಂಖ್ಯೆಯ ಪ್ರಬಲ ಜಾತಿ, ಆರ್ಥಿಕವಾಗಿ ಬಡ ಜಾತಿ ಎಂದು ಅಂಕಿಸಂಖ್ಯೆಗಳ ಮೂಲಕ ತೋರಿಸಿಕೊಳ್ಳಬೇಕು, ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬ ಜಾತಿ ನಾಯಕರು ಅದಕ್ಕಾಗಿ ತುಂಬಾ ತುಂಬಾ ಶ್ರಮ ಪಡುತ್ತಿದ್ದಾರೆ. ಎಲ್ಲಾ ಕಡೆ ಜಾತಿ ಜನಗಣತಿಯ ಸಮಯದಲ್ಲಿ ಯಾವ ರೀತಿ ತಮ್ಮ ಜಾತಿಯ ಹೆಸರನ್ನು ದಾಖಲು ಮಾಡಬೇಕು ಎಂಬ ತರಬೇತಿ ಅಥವಾ ಜಾಗೃತ ಶಿಬಿರಗಳನ್ನು ಮತ್ತು ಪತ್ರಿಕಾ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ತಮ್ಮ ಅಸ್ತಿತ್ವ ಈ ಜಾತಿ ಗಣತಿಯಿಂದಲೇ ನಿರ್ಧಾರವಾಗುತ್ತದೆ ಎಂದು ಗಂಭೀರವಾಗಿ ಪರಿಗಣಿಸಿದ್ದಾರೆ. ಮದುವೆ, ಚುನಾವಣೆ ಮುಂತಾದ ಸಂಬಂಧಗಳಲ್ಲಿ ಜಾತಿ, ಉಪಜಾತಿ,…
ಮುಂದೆ ಓದಿ..
