ಯಲಹಂಕ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಮತ್ತು ತಾಯಿಗೆ ಹಲ್ಲೆ – ಇಬ್ಬರ ವಿರುದ್ಧ ಎಫ್‌ಐಆರ್
Taluknewsmedia.comಬೆಂಗಳೂರು, ಜೂಲೈ 4 2025 ನಗರದ ಯಲಹಂಕದ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಮತ್ತು ಅವಳ ತಾಯಿಯ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ ದಾರುಣ ಘಟನೆ ನಡೆದಿದೆ. ಈ ಘಟನೆ ಜೂನ್ 27ರಂದು ಬೆಳಿಗ್ಗೆ ಸುಮಾರು 11ರಿಂದ 12ರ ಮಧ್ಯೆ ನಡೆದಿದೆ. ಹಲ್ಲೆಗೊಳಗಾದವರ ಪ್ರಕಾರ, ಹತ್ತನೇ ತರಗತಿಯಲ್ಲಿ ಓದುತ್ತಿರುವ ರಚಿಯಾ ಮತ್ತು ಅವರ ತಾಯಿ ಶಾಲೆಯ ಆವರಣದಲ್ಲಿ ಇದ್ದಾಗ, ಸಿಮ್ರಾನ್ ಎಂಬ ವಿದ್ಯಾರ್ಥಿನಿಯ ತಾಯಿ ಹಾಗೂ ಮತ್ತೊಬ್ಬ ಮಹಿಳೆ ಪುಂಡತನ ಮೆರೆದಿದ್ದಾರೆ. ಇಬ್ಬರ ಮೇಲೂ ಎದೆ ಭಾಗ ಹಾಗೂ ಖಾಸಗಿ ಭಾಗಗಳಲ್ಲಿ ಹೊಡೆದು ಮಾನಸಿಕ ಹಾಗೂ ದೈಹಿಕ ತೊಂದರೆ ಉಂಟುಮಾಡಲಾಗಿದೆ. ಸಿಮ್ರಾನ್ ರೇಷ್ಮಾ ರವರ ಪ್ರಕಾರ, ಹಲ್ಲೆಗೊಳಗಾದಾಗ ಬಟ್ಟೆ ಹರಿದಿದ್ದು, ಸಾರ್ವಜನಿಕ ಸ್ಥಳದಲ್ಲೇ ತೀವ್ರ ಅವಮಾನ ಅನುಭವಿಸಿದ್ದಾರೆ. ಇದೇ ವೇಳೆ ಆರೋಪಿಗಳು, “ನೀವು ಯಾರಾದರೂ ಬಳಿ ದೂರು ನೀಡಿದರೆ ಕೊಂದು ಹಾಕುತ್ತೇವೆ” ಎಂದು ಜೀವ ಬೆದರಿಕೆ…
ಮುಂದೆ ಓದಿ..
