ಸಂಸ್ಥೆಯಲ್ಲಿ ನಕಲಿ ಆರ್ಡರ್‌ಗಳ ಮೂಲಕ ₹15 ಲಕ್ಷದ ಮೋಸ: ಉದ್ಯೋಗಿ ಸೆಲ್ವಕುಮಾರ್ ವಿರುದ್ಧ FIR
Taluknewsmedia.comಬೆಂಗಳೂರು, ಜುಲೈ 12:2025 ರಾಜಧಾನಿ ಬೆಂಗಳೂರು ಸೇರಿದ ಖಾಸಗಿ ಎಲೆಕ್ಟ್ರಾನಿಕ್ಸ್ ಕಂಪನಿಯಾದ Nenton Electronics (EL 11863) ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸಮಾಡುತ್ತಿದ್ದ ಸೆಲ್ವಕುಮಾರ್ ಸಕರ ಎಂಬವರು ಕಂಪನಿಯ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ನಕಲಿ ಪರ್ಚೇಸ್ ಆರ್ಡರ್‌ಗಳ ಮೂಲಕ ₹15,45,800 ಮೊತ್ತದ ಹಣವನ್ನು ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತದಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಂಪನಿಯವರ ಪ್ರಕಾರ, ಈ ಹಣಕಾಸು ಅವ್ಯವಹಾರದ ಪರಿಣಾಮವಾಗಿ ಸಂಸ್ಥೆಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದ್ದು, ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರಿನಲ್ಲಿ ಕೇಳಲಾದ ಪ್ರಮುಖ ಬೇಡಿಕೆಗಳು: ಆರೋಪಿಯನ್ನು ತಕ್ಷಣ ಬಂಧಿಸಬೇಕು ಕಂಪನಿಗೆ ವಂಚನೆಯ ಮೂಲಕ ಉಂಟಾದ ಮೊತ್ತವನ್ನು ಮರುಪಡೆಯಬೇಕು ಸೆಲ್ವಕುಮಾರ್ ವಿರುದ್ಧ ಸಂಪೂರ್ಣ ತನಿಖೆ ನಡೆಯಬೇಕು ಬಾಗಲೂರು ಪೊಲೀಸ್ ಠಾಣೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.…
ಮುಂದೆ ಓದಿ..
