ಬೆಂಗಳೂರು ಹೆಗಡೆನಗರದಿಂದ ವ್ಯಕ್ತಿ ನಾಪತ್ತೆ – ಕುಟುಂಬದವರಿಂದ ಪೊಲೀಸರು ಶೋಧಿಸಲು ಮನವಿ
Taluknewsmedia.comಬೆಂಗಳೂರು, ಜುಲೈ 10:2025 ಬೆಂಗಳೂರು ನಗರದ ಹೆಗಡೆನಗರದಲ್ಲಿ ವಾಸವಿದ್ದ 37 ವರ್ಷದ ಭರತ್ ಕುಮಾರ್ ಜಾ ಎಂಬವರು ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿಯವರು ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಪತ್ನಿಯ ವಿವರದಂತೆ, ಅವರು ತಮ್ಮ ಪತಿ ಮತ್ತು ಮಗುವಿನೊಂದಿಗೆ ಹೆಗಡೆನಗರ, ಬಿ.ಎನ್.ನಗರ 560077 ವಿಳಾಸದಲ್ಲಿ ವಾಸವಿದ್ದರೆ. ಭರತ್ ಕುಮಾರ್ ಜಾ ಅವರು 2025ರ ಜೂನ್ 16ರಂದು ಬೆಳಿಗ್ಗೆ 7:30 ಗಂಟೆ ಸುಮಾರಿಗೆ, “ಬಿಹಾರಕ್ಕೆ ನನ್ನ ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆ ಬಿಡುತ್ತಾರೆ. ನಂತರ ಜೂನ್ 24ರಂದು, ಅವರು “ನಾನು ಬಿಹಾರಕ್ಕೆ ಬಂದಿದ್ದೇನೆ” ಎಂಬ ವಾಯ್ಸ್ ಮೆಸೇಜ್‌ನ್ನು ಪತ್ನಿಗೆ ಕಳುಹಿಸಿದ್ದರು. ಇದರ ನಂತರದಿಂದ ಅವರು ಸಂಪರ್ಕಕ್ಕೆ ಬಂದಿಲ್ಲ. ಅವರ ಮೊಬೈಲ್ ಸಂಖ್ಯೆಗೆ (9845539875) ಕರೆ ಮಾಡಿದಾಗ ‘ಸ್ವಿಚ್ ಆಫ್’ ಆಗಿದ್ದು, ಕುಟುಂಬದವರು ಸಂಬಂಧಿಕರಿಗೂ ವಿಚಾರಿಸಿದ್ದಾರೆ, ಆದರೆ ಯಾವುದೇ ಸುಳಿವು ಸಿಗಿಲ್ಲ. ನಾಪತ್ತೆಯಾದ ವ್ಯಕ್ತಿಯ…
ಮುಂದೆ ಓದಿ..
